ಜಿಲ್ಲೆ

ಲಯನ್ಸ್ ಅಕಾಡೆಮಿ ಶಾಲೆ ಸಾಧನೆ

ನಾಗೇಶ ಎಸ್

ಸರಗೂರು: ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಲಯನ್ಸ್ ಅಕಾಡೆಮಿ ಶಾಲೆಯು ಸರಗೂರು ತಾಲೂಕಿಗೆ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಲಯನ್ಸ್ ಅಕಾಡೆಮಿ ಟ್ರಸ್ಟ್ ತಿಳಿಸಿದೆ. ವಿದ್ಯಾರ್ಥಿನಿ ಅರ್ಪಿತಾ ಎಂಬ 625ಕ್ಕೆ 603 ಅಂಕಗಳನ್ನು ಪಡೆದು ಸರಗೂರು ತಾಲೂಕಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶಾಲೆಗೆ ದ್ವಿತೀಯ ಸ್ಥಾನದಲ್ಲಿ ಪವನ್‌ಕುಮಾರ್ 596 ಅಂಕ, ತೃತೀಯ ಸ್ಥಾನದಲ್ಲಿ ಕಲಾಶ್ರೀ ಮತ್ತು ಶ್ರೇಯಾ ಆರ್.ಪಿ ತಲಾ 587 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 11 ಡಿಸ್ಟಿಂಕ್ಷನ್, 32 ಪ್ರಥಮ ದರ್ಜೆ ಹಾಗೂ 2 ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.