ಜಿಲ್ಲೆ

ಅನಂತಪದ್ಮನಾಭ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ ಉಡುಪಿ ತಾಲೂಕಿನ ಬಾಳೆಹಣ್ಣಿಗೊಲಿದ ಭಗವಂತ ಎಂದು ಪ್ರಸಿದ್ಧಿ ಪಡೆದ ಕದಳೀ ಪ್ರಿಯ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ ಭಾನುವಾರ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆ ನಡೆಯಿತು. ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ದಿನದಂದು ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ದೇವರ ದರ್ಶನ ವಾಡಿ ಹೋಗುವ ಸಂಪ್ರದಾಯ ಇದೆ. ಹೀಗಾಗಿ ಇದು ಮದುಮಕ್ಕಳ ಜಾತ್ರೆ ಎಂದು ಪ್ರಸಿದ್ಧಿಯಾಗಿದೆ. ಅರ್ಚಕರಾದ ಸುಧಾಕರ ಆಡಿಗ, ರು ಪ್ರಸಾದ್ ಅಡಿಗ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ, ಸಮಿತಿಯ ಸದಸ್ಯರಾದ ರಾಜಕುವಾರ್ ಶೆಟ್ಟಿ ದೊಡ್ಮನೆ, ದಿನೇಶ್ ಪೂಜಾರಿ ಗರಡಿ ಮನೆ, ಸಂತೆಕಟ್ಟೆ ರಾಮದಾಸ್ ನಾಯ್ಕ ಬುಕ್ಕಿಗುಡ್ಡೆ, ಲಲಿತಾಂಬ ಆನಂದ ಗೌಡ ಕುಕ್ಕುಂಜಾರು ಜೋಗಿ ಬೆಟ್ಟು, ರಾಮ ಕುಲಾಲ್ ಪಕ್ಕಾಲ್, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಶಾಂತಾ ಆರ್. ಶೆಟ್ಟಿ ವಡ್ಡಮೇಶ್ವರ, ವ್ಯವಸ್ಥಾಪನಾ ಸಮಿತಿ ತಾಂತ್ರಿಕ ಸಲಹೆಗಾರ ಸಂತೋಷ್ ಕುಲಾಲ್ ಪಕ್ಕಾಲು, ಕಾನೂನು ಸಲಹೆಗಾರ ವಿಶ್ವಾಸ ಶೆಟ್ಟಿ, ಕಚೇರಿ ಪ್ರಬಂಧಕ ಚನ್ನಕೇಶವ ಭಟ್, ನಿತ್ಯ ಸ್ವಾಗತ ಸಮಿತಿ ಅಧ್ಯಕ್ಷ ಸಂದೀಪ ಶೆಟ್ಟಿ, ಸಮಿತಿ ಸದಸ್ಯರು, ಭಕ್ತರಿದ್ದರು.

ಬಾಳೆಹಣ್ಣಿಗೊಲಿದ ಭಗವಂತ

ಬಾಳೆಹಣ್ಣು ಪ್ರಿಯವಾಗಿರುವ ಇಲ್ಲಿನ ದೇವರಿಗೆ ಭಕ್ತರು ಬಾಳೆಹಣ್ಣಿನ ಸೇವೆ ನೀಡುತ್ತಿದ್ದಾರೆ. ಸಂಕ್ರಮಣ ಪ್ರಯುಕ್ತ ಭಕ್ತರಿಂದ 15 ಸಾವಿರಕ್ಕೂ ಅಧಿಕ ಬಾಳೆಹಣ್ಣಿನ ಸೇವೆ ನಡೆಯಿತು.