filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 56.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

28ರಂದು ಚಿಕ್ಕೋಡಿಯಲ್ಲಿ ಲಿಂಗಾಯತ ಸಮಾವೇಶ

ಸೋಮಲಿಂಗ ತಳವಾರ

ಚಿಕ್ಕೋಡಿ: ಕಾನೂನಾತ್ಮಕವಾಗಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಪಡೆದುಕೊಳ್ಳುವ ಉದ್ದೇಶದಿಂದ ಏ.28ರಂದು ಚಿಕ್ಕೋಡಿ ಶೈಣಿಕ ಜಿಲ್ಲಾಮಟ್ಟದ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂದ ಚಿಕ್ಕೋಡಿ ಜಿಲ್ಲಾಧ್ಯ ಅಣ್ಣಪ್ಪ ಹಳಿಜೋಳೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ, ಸಮುದಾಯದ ಹಾಲಿ, ಮಾಜಿ ಶಾಸಕ, ಸಂಸದರು ಸೇರಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ಪಟ್ಟಣದ ರಾಣಿ ಚನ್ನಮ್ಮ ವತ್ತದಿಂದ ಕುಂಭಮೇಳ ಮೆರವಣಿಗೆ ಆರಂಭಗೊಳ್ಳುವುದು. 501 ಜನರಿಗೆ ವಚನಾನಂದ ಸ್ವಾಮೀಜಿ ಲಿಂಗ ದೀೆ ನೀಡುವರು. ಬಳಿಕ ಪದ್ಮಾ ಮಂಗಲ ಭವನದಲ್ಲಿ ಸಮಾವೇಶ ಕಾರ್ಯಕ್ರಮ ನಡೆಯಲಿದೆ ಎಂದರು.

ವೀರಶೆವ ಲಿಂಗಾಯತ ಪಂಚಮಸಾಲಿ ಸಂದ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಗುರುಗೌಡ ಪಾಟೀಲ ಮಾತನಾಡಿ, ಸಮಾವೇಶದಲ್ಲಿ ಮೀಸಲಾತಿ ಹೋರಾಟದ ರೂಪುರೇಷ ತಯಾರಿಸಲಾಗುವುದು ಎಂದರು.

ಚಿಕ್ಕೋಡಿ ಜಿಲ್ಲಾ ಉಪಾಧ್ಯ ಮಲ್ಲಪ್ಪ ಕಲ್ಲಟ್ಟಿ, ಯುವ ಟಕದ ಜಿಲ್ಲಾಧ್ಯ ಚನ್ನಪ್ಪ ಅಂಬೋಳೆ, ಮಹಿಳಾ ಟಕದ ಜಿಲ್ಲಾಧ್ಯೆ ಮೀನಾ ಪಾಟೀಲ, ಮಹಿಳಾ ಟಕದ ಉಪಾಧ್ಯೆ ಅನಸೂಯಾ ಚನ್ನವರ, ಮಲ್ಲಿಕಾರ್ಜುನ ಪಾಟೀಲ ಇದ್ದರು.