ರುದ್ರಗೌಡ ಮಾಲಿಪಾಟೀಲ್. 
ಜಿಲ್ಲೆ

ಲಿಂಗಾಯತ ಸಮುದಾಯದ ಶಾಸಕಗೆ ಸಿಎಂ ಸ್ಥಾನ ನೀಡಲಿ

ಶಶಿಧರ ಎಲ್

ಲಿಂಗಸುಗೂರು: ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಹೆಚ್ಚಿನ ಶಾಸಕರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಪಂಚಮಸಾಲಿ ಶಾಸಕರ ಪೈಕಿ ಒಬ್ಬರಿಗೆ ಸಿಎಂ ಸ್ಥಾನ ನೀಡಬೇಕೆಂದು ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಉಪಾಧ್ಯಕ್ಷ ರುದ್ರಗೌಡ ಮಾಲಿಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಕಾಂಗ್ರೆಸ್‌ನ 135 ಶಾಸಕರ ಪೈಕಿ 39 ಜನ ಲಿಂಗಾಯತ ಸಮುದಾಯದವರಾಗಿದ್ದಾರೆ. ಈ ಪೈಕಿ 10 ಜನ ಪಂಚಮಸಾಲಿ ಸಮುದಾಯದವರಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ವೀರೇಂದ್ರ ಪಾಟೀಲ್ ಬಳಿಕ ಲಿಂಗಾಯತರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಿಲ್ಲ. ಈಗ ಒಬ್ಬರಿಗೆ ಸಿಎಂ ಸ್ಥಾನ ಅಥವಾ ಡಿಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ವಿರುಪನಗೌಡ ಮಾಲಿಪಾಟೀಲ್, ರಮೇಶ, ಜಗದೀಶ ಅಂಗಡಿ, ವೀರೇಶ ಶಿವಾಜಿ, ಪ್ರಭು ದಾನಗೌಡ ಇದ್ದರು.