ಲಿಂಗಸುಗೂರಿನಲ್ಲಿ ಒಳಮೀಸಲಾತಿ ಐಕ್ಯತಾ ಸಮಿತಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಾಮಯ್ಯ ಮುರಾರಿ, ಎಚ್.ಬಿ.ಮುರಾರಿ, ಹನುಮಂತಪ್ಪ ಕುಣಿಕಲ್ಲೂರು, ಲಿಂಗಪ್ಪ ಪರಂಗಿ, ಡಿ.ಬಿ.ಸೋಮನಮರಡಿ, ಮುತ್ತಪ್ಪ ಕರಡಕಲ್, ಕುಪ್ಪಣ್ಣ ಹೊಸಮನಿ ಇತರರಿದ್ದರು.  
ಜಿಲ್ಲೆ

ಸರ್ಕಾರದ ಮೇಲಿನ ನಿರೀಕ್ಷೆ ಹುಸಿ

ಪ್ರವೀಣ ಉದುಸಾ ದಲಬಂಜನ್

ಲಿಂಗಸುಗೂರು: ಸುಪ್ರಿಂ ಕೋರ್ಟ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ಜಿಲ್ಲಾ ಬಂದ್ ಗುರುವಾರ ಪಟ್ಟಣದಲ್ಲಿ ಯಶಸ್ವಿಗೊಂಡಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಗಡಿಯಾರ ಚೌಕ್ ಮೂಲಕ ಬಸ್ ನಿಲ್ದಾಣ ವೃತ್ತದವರೆಗೆ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. 2024 ಆ.1 ರಂದು ಸರ್ವೋಚ್ಛ ನ್ಯಾಯಾಲಯವು ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರಗಳಿಗೆ ನೀಡಿರುವ ಪರಮಾಧಿಕಾರದ ತೀರ್ಪನ್ನು ಸ್ವಾಗತಿಸಿದ ರಾಜ್ಯ ಸರ್ಕಾರ ಜಾರಿಗೊಳಿಸುವುದೆಂಬ ನಿರೀಕ್ಷೆ ಹುಸಿಯಾಗಿದೆ. ಚಿತ್ರದುರ್ಗದ ಸಮಾವೇಶದಲ್ಲಿ ಘೋಷಿಸಿದಂತೆ ನುಡಿದಂತೆ ನಡೆಯುತ್ತೇವೆ ಎಂದು ನೀಡಿದ ಭರವಸೆ ದೂರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ದಶಕಗಳ ಸುದೀರ್ಘ ವಿಚಾರಣೆ ಬಳಿಕ ಸಾಮಾಜಿಕ ನ್ಯಾಯಕ್ಕೆ ಸ್ಪಷ್ಟ ಗೆಲುವು ದೊರೆತು ಎರಡು ತಿಂಗಳು ಗತಿಸಿದರೂ ಮತ್ತೊಂದು ಸಮಿತಿ ನೇಮಕವೆಂಬ ಕಾಲಹರಣದ ವಿಳಂಬಕ್ಕೆ ದಾರಿ ಮಾಡಿಕೊಡುತ್ತಿರವುದು ಯಾವ ನ್ಯಾಯ. ಸರ್ವೋಚ್ಛ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಒಳಮೀಸಲಾತಿ ಐಕ್ಯತಾ ಹೋರಾಟ ಸಮಿತಿ ಮುಖಂಡರಾದ ಪಾಮಯ್ಯ ಮುರಾರಿ, ಎಚ್.ಬಿ.ಮುರಾರಿ, ಹನುಮಂತಪ್ಪ ಕುಣಿಕಲ್ಲೂರು, ಲಿಂಗಪ್ಪ ಪರಂಗಿ, ಡಿ.ಬಿ.ಸೋಮನಮರಡಿ, ಮುತ್ತಪ್ಪ ಕರಡಕಲ್, ಕುಪ್ಪಣ್ಣ ಹೊಸಮನಿ, ಜಂಬಣ್ಣ ದೊಡ್ಡಮನಿ, ರಮೇಶ ಗೋಸ್ಲೆ, ಹುಸೇನಪ್ಪ, ತಿಪ್ಪಣ್ಣ ಕರಡಕಲ್, ಮೋಹನ ಗೋಸ್ಲೆ, ಯಲ್ಲಪ್ಪ ಗೊರೇಬಾಳ, ಸಂಜೀವಪ್ಪ ಹುನಕುಂಟಿ, ಪ್ರಭುಲಿಂಗ ಮೇಗಳಮನಿ, ನಾಗರಾಜ ಮಾಳಿ, ಪರಶುರಾಮ ಕೆಂಭಾವಿ, ಶರಣಪ್ಪ ಕಟ್ಟಿಮನಿ, ಅರುಣ್, ಅನಿಲ್ ಕುಮಾರ, ನಾಗಪ್ಪ, ಹನುಮಂತ, ಮಹಾದೇವಪ್ಪ, ಹುಲಗಪ್ಪ ಕೆಸರಟ್ಟಿ, ವಿಜಯ ಪೋಳ್, ಅಮರೇಶ ಮ್ಯಾಗೇರಿ, ಮಲ್ಲಿಕಾರ್ಜುನ, ಮಂಜುನಾಥ ಸೇರಿದಂತೆ ಇತರರು ಇದ್ದರು.