ಜಿಲ್ಲೆ

ಪದಾಧಿಕಾರಗಳ ಆಯ್ಕೆ ಸಭೆ ನಾಡಿದ್ದು

ಅಶೋಕ್ ಕುಮಾರ್ ಎನ್

ಲಿಂಗಸುಗೂರು: ಗಂಗಾಮತಸ್ಥ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಜ.9 ರಂದು ಸಭೆ ಕರೆಯಲಾಗಿದೆ ಎಂದು ತಾಲೂಕು ಅಧ್ಯಕ್ಷ ಅಮರೇಶ ಕಲ್ಲೂರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಪಟ್ಟಣದ ಸಮಾಜದ ಸಮುದಾಯ ಭವನದಲ್ಲಿ ಜಿಲ್ಲಾದ್ಯಕ್ಷ ಕೆ.ಶಾಂತಪ್ಪ ನೇತೃತ್ವದಲ್ಲಿ ಆಯ್ಕೆ ಸಭೆ ನಡೆಯಲಿದ್ದು, ತಾಲೂಕ ಘಟಕ, ಪಾಲಕರ ಘಟಕ ಮತ್ತು ನೌಕರರ ಘಟಕಕ್ಕೆ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುವುದು. ಸಮಾಜ ಸೇವಾಕಾಂಕ್ಷಿಗಳು ಭಾನುವಾರ ಸಂಜೆ 5 ಗಂಟೆಯೊಳಗೆ ಸಮಾಜದ ಪ್ರಮುಖ ಕೆ.ರಾಮುಲು (9901175338) ಅವರನ್ನು ಸಂಪರ್ಕಿಸಬೇಕು. ನೌಕರರ ಘಟಕದ ಆಕಾಂಕ್ಷಿಗಳು ಮಂಜುನಾಥ ಕೆಎಂಎಫ್ (7019563019) ಅವರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದರು. ಪ್ರಮುಖರಾದ ಕೆ.ರಾಮುಲು, ಮಂಜುನಾಥ, ಬಾಲರಾಜ, ಮಲ್ಲೇಶ ಗುರುಗುಂಟ, ಬಾಲರಾಜ ಇದ್ದರು.