ಸರ್ವೇ ಗೌರವಧನ ನೀಡುವಂತೆ ಆಗ್ರಹಿಸಿ ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಪ್ರಭುಲಿಂಗ ಗದ್ದಿ, ಬಸ್ಸಪ್ಪ ಹಂದ್ರಾಳ, ಚಿದಾನಂದ, ಹಾಜಿಬಾಬು ಕಲ್ಯಾಣಿ, ಗುರುಸಂಗಯ್ಯ ಗಣಾಚಾರಿ ಇತರರಿದ್ದರು. 
ಜಿಲ್ಲೆ

ಸಮೀಕ್ಷೆ ಗೌರವಧನ ಬಿಡುಗಡೆಗೊಳಿಸಿ

ಶಾಮಸುಂದರ್ ಕೊಪ್ಪಳಕರ್

ಲಿಂಗಸುಗೂರು: ಎಸ್ಸಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ನಡೆಸಿದ ಶಿಕ್ಷಕರಿಗೆ ಗೌರವ ಸಂಭಾವನೆ, ಗಳಿಕೆ ರಜೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ ನೇತೃತ್ವದ ಏಕ ಸದಸ್ಯ ಪೀಠದ ವಿಚಾರಣಾ ಆಯೋಗ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮಗ್ರ ಸಮೀಕ್ಷೆ-2025 ಸರ್ವೇ ಕಾರ್ಯದಲ್ಲಿ 2025 ಮೇ 5 ರಿಂದ ಮೇ 28 ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಸಹ ಶಿಕ್ಷಕರು, ಪ್ರೌಢ ಶಾಲಾ ಮುಖ್ಯಶಿಕ್ಷಕರು ಗಣತಿದಾರರು ಮತ್ತು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಕೆಸಿಎಸ್‌ಆರ್ ನಿಯಮಾನುಸಾರ ಬೇಸಿಗೆ ರಜೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಗಳಿಕೆ ರಜೆಗಳ ಸೌಲಭ್ಯ ಹಾಗೂ ನಿಗದಿ ಪಡಿಸಿರುವ ಸೂಕ್ತ ಗೌರವಧನ ಶಿಕ್ಷಕರ ಖಾತೆಗೆ ಶೀಘ್ರವೇ ಜಮಾ ಮಾಡಬೇಕೆಂದು ಒತ್ತಾಯಿಸಿದರು. ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮರೇಶಪ್ಪ ಹೂನೂರು, ಗಂಗಾಧರ, ರಂಗಣ್ಣ ದೊಡ್ಡಮನಿ, ರೆಹಮಾನ ಹವಾಲ್ದಾರ್, ಕವಿತಾ, ಅಚ್ಚಮ್ಮ, ನಾಗರತ್ನಾ ಇದ್ದರು.