ರಾಮನವಮಿ ಮತ್ತು ಹಿಂದು ಸಾಮ್ರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ತ ಲಿಂಗಸುಗೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಯುವಕರು ಕುಣಿದು ಸಂಭ್ರಮಿಸಿದರು. 
ಜಿಲ್ಲೆ

ಲಿಂಗಸುಗೂರಿನಲ್ಲಿ ಶೋಭಾಯಾತ್ರೆ - ಪ್ರಮೋದ ಮುತಾಲಿಕ್ ಚಾಲನೆ

ಲಿಂಗಸುಗೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಮನವಮಿ ಮತ್ತು ಹಿಂದು ಸಾಮ್ರಾಜ್ಯೋತ್ಸವ ನಿಮಿತ್ತ ಶೋಭಾಯಾತ್ರೆ ಮೆರವಣಿಗೆಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಭಾನುವಾರ ಚಾಲನೆ ನೀಡಿದರು.

ಪಟ್ಟಣದ ಸಂತೆ ಬಜಾರ್‌ನಿಂದ ಆರಂಭಗೊಂಡ ಶ್ರೀರಾಮ ಮತ್ತು ಆಂಜನೇಯ ಮೂರ್ತಿಗಳ ಶೋಭಾಯಾತ್ರೆಯು ಗಡಿಯಾರ ವೃತ್ತ, ಅಂಚೆ ಕಚೇರಿ, ಬಸ್ ನಿಲ್ದಾಣ ವೃತ್ತದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಶ್ರೀರಾಮಸೇನೆ ಕಾರ್ಯಕರ್ತರು ಶ್ರೀರಾಮ ಮತ್ತು ಹನುಮ ಜಯಘೋಷ ಕೂಗಿದರು. ಧ್ವನಿವರ್ಧಕದ ಹಾಡುಗಳಿಗೆ ಯುವಕರು ಕುಣಿದು ಸಂಭ್ರಮಿಸಿದರು.

ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ರಘುಗೌಡ ನಾಯಕ, ಎಬಿವಿಪಿ ರಾಜ್ಯ ಸಮಿತಿ ಸದಸ್ಯ ಹನುಮಂತ ಅಂಬಿಗೇರ, ಮುಖಂಡರಾದ ಈಶ್ವರ ವಜ್ಜಲ್, ಚನ್ನಬಸವ ಹಿರೇಮಠ, ಸಿದ್ದು ಬಡಿಗೇರ, ಪರಶುರಾಮ ಕೆಂಭಾವಿ, ನಾಗರಾಜ ರೈಸ್‌ಮಿಲ್, ನಿರುಪಾದಿ ಹಿರೇಮಠ, ಶಂಭು ಪಾಟೀಲ್, ಮಂಜುನಾಥ ಗುತ್ತೇದಾರ, ಪುರುಷೋತ್ತಮ ಭಂಡಾರಿ, ಮಂಜುನಾಥ ನಾಯಕ, ಮಾರುತಿ ಗೋಸ್ಲೆ, ಹುಲುಗೇಶ ನಾಯಕ, ಗೋವಿಂದ ಜಾಜು, ಕೃಷ್ಣ ಯಲಗಲದಿನ್ನಿ ಇತರರಿದ್ದರು.