ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಪ್ರಮುಖರಾದ ಅಮರೇಶ ನಾಯಕ ರತ್ನಗಿರಿ, ಹನುಮಂತ ಅಂಬಿಗೇರ, ಕಾಳಪ್ಪ ನಾಯಕ, ಅಮರೇಶ ಛತ್ರಪತಿ, ರಮೇಶ ನಾಯಕ, ಕರಿಯಪ್ಪ ಅಂಬಿಗೇರ, ಹನುಮಂತ ಪವಾರ್, ನಂದಪ್ಪಗೌಡ, ಆದಪ್ಪ, ಅಮರೇಶ ನಾಯಕ, ಶರಣಗೌಡ, ರಘುಗೌಡ ನಾಯಕ, ಮೌನೇಶ, ಶಿವು ಹುಬ್ಬಳ್ಳಿ, ಬಸವರಾಜ ನಾಯಕ, ಮಲ್ಲೇಶ ಇತರರಿದ್ದರು. 
ಜಿಲ್ಲೆ

ಪಿಐ ಹೊಸಗೇರಪ್ಪ ವರ್ಗಾವಣೆ ಸಲ್ಲದು

ಶಾಮಸುಂದರ್ ಕೊಪ್ಪಳಕರ್

ಲಿಂಗಸುಗೂರು: ಪಿಐ ಹೊಸಗೇರಪ್ಪ ವರ್ಗಾವಣೆ ಮಾಡುವ ಷಡ್ಯಂತ್ರ ವಿರೋಧಿಸಿ ಸಾರ್ವಜನಿಕರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಶನಿವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಅಕ್ರಮ ಚಟುವಟಿಕೆಗಳ ಹಾವಳಿಯನ್ನು ಪಿಐ ತಡೆದಿದ್ದಾರೆ. ಎರಡು ವರ್ಷದಲ್ಲಿ 280 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ದಕ್ಷ ಅಧಿಕಾರಿ ಹೊಸಗೇರಪ್ಪ ಅವರು ಗ್ರಾಮೀಣ ಭಾಗದ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.

ಮಟ್ಖಾ ಬುಕ್ಕಿಗಳು, ಇಸ್ಪೀಟ್ ದಂಧೆ ಕೋರರು ಭಯಹುಟ್ಟಿಸಿರುವ ಪಿಐ ಹೊಸಗೇರಪ್ಪ ಅವರನ್ನು ವರ್ಗಾವಣೆ ಮಾಡಬಾರದು. ವರ್ಗಾವಣೆ ಮಾಡಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.