ಲಿಂಗಸುಗೂರಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಎಸಿ ಬಸವಣೆಪ್ಪ ಕಲಶೆಟ್ಟಿ ಪೂಜೆ ಸಲ್ಲಿಸಿ ಸ್ವಾಗತಿಸಿಕೊಂಡರು. ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ತಹಸೀಲ್ದಾರ್ ಶಂಶಾಲಂ, ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ಬಿಇಒ ಹುಂಬಣ್ಣ ರಾಠೋಡ್, ಪಿಐ ಪುಂಡಲೀಕ ಪಟಾತ್ತಾರ, ಟಿಎಚ್‌ಒ ಡಾ.ಅಮರೇಶ ಪಾಟೀಲ್, ಪುರಸಭೆ ಸಿಒ ರಡ್ಡಿ ರಾಯನಗೌಡ ಇದ್ದರು. 
ಜಿಲ್ಲೆ

ಮಹಿಳೆಯರಿಂದ ಕುಂಭ ಕಳಸದೊಂದಿಗೆ ಮೆರವಣಿಗೆ

ಲಿಂಗಸುಗೂರು: ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ ಅದ್ದೂರಿಯಾಗಿ ಬುಧವಾರ ಸ್ವಾಗತಿಸಿಕೊಂಡಿತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಆಗಮಿಸಿದ ಜ್ಯೋತಿ ರಥಕ್ಕೆ ಎಸಿ ಬಸವಣೆಪ್ಪ ಕಲಶೆಟ್ಟಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದ ನಂತರ ಬಸ್ ನಿಲ್ದಾಣ ವೃತ್ತ, ಗಡಿಯಾರ ವೃತ್ತ, ಬಸವಸಾಗರ ವೃತ್ತದವರೆಗೆ ಮಹಿಳೆಯರು ಕುಂಭ ಕಳಸ ಹೊತ್ತು, ಬಾಜಾ ಭಜಂತ್ರಿಯ ಜತೆ ಮೆರವಣಿಗೆ ಮೂಲಕ ತೆರಳಿ ಗುರುಗುಂಟಾಕ್ಕೆ ಕಳುಹಿಸಿ ಕೊಡಲಾಯಿತು.

ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ತಹಸೀಲ್ದಾರ್ ಶಂಶಾಲಂ, ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ಬಿಇಒ ಹುಂಬಣ್ಣ ರಾಠೋಡ್, ಪಿಐ ಪುಂಡಲೀಕ ಪಟಾತ್ತಾರ, ಟಿಎಚ್‌ಒ ಡಾ.ಅಮರೇಶ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ, ಸಿಡಿಪಿಒ ಗೋಕುಲಸಾಬ, ಅಬಕಾರಿ ನಿರೀಕ್ಷಕ ಮಹ್ಮದ್ ಹುಸೇನ, ಪ್ರಾಣೇಶ ಜೋಷಿ, ಹನುಮಂತಪ್ಪ ಕುಳಗೇರಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮಂಜುನಾಥ ಕಾಮಿನ್, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಕನ್ನಡಪರ ಸಂಘಟನೆಗಳ ಪ್ರಮುಖರಾದ ಅಮರೇಶ ತಾವರಗೇರ, ಜಿಲಾನಿಪಾಶಾ, ಮೌನೇಶ ಗೋಸ್ಲೆ, ಮಾದೇಶ ಸರ್ಜಾಪುರ ಸೇರಿ ನಾನಾ ಇಲಾಖೆ ಅಧಿಕಾರಿಗಳು, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಸಂಘಟನೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.