ಜಿಲ್ಲೆ

ಸಹಕಾರಿ ಸಂಘಗಳಿಂದ ರೈತರು ಆರ್ಥಿಕ ಅಭಿವೃದ್ಧಿ

ಲಿಂಗಸುಗೂರು: ತಾಲೂಕಿನ ಗೊರೇಬಾಳ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಅಪೆಕ್ಸ್ ಬ್ಯಾಂಕಿನಿಂದ 3 ಲಕ್ಷ ರೂ. ಅನುದಾನ ಒದಗಿಸಲಾಗುವುದೆಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಪೂರ ಹೇಳಿದರು.

ಗೊರೇಬಾಳ ಗ್ರಾಮದಲ್ಲಿ ಮಂಗಳವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಚಿಕ್ಕಗ್ರಾಮದಲ್ಲಿ ಸಹಕಾರ ಸಂಘದ ಕಟ್ಟಡ ನಿರ್ಮಾಣ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಮೆಚ್ಚುವಂತದ್ದು. ರೈತರು ಕಡಿಮೆ ಬಡ್ಡಿಯಲ್ಲಿ ಸಿಗುವ ಸಾಲದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಹಕಾರ ಸಂಘಗಳ ಮೂಲಕ ರೈತರು ಕೃಷಿಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ ಕರಡಕಲ್ಲ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಗ್ರಾಪಂ ಅಧ್ಯಕ್ಷ ವಿಠ್ಠಲ, ಪ್ರಮುಖರಾದ ಸೋಮಶೇಖರ ಐದನಾಳ, ಲಾಲಪ್ಪ ರಾಠೋ, ಜಗದೀಶಗೌಡ ಹಾಲಭಾವಿ, ಚನ್ನಾರೆಡ್ಡಿ ಬಿರಾದಾರ ಇದ್ದರು.