ಈಚನಾಳ ಗ್ರಾಮದಲ್ಲಿ ಏಡ್ಸ್ ನಿಯಂತ್ರಣ ಜಾನಪದ ಕಲಾ ತಂಡದಿಂದ ಕಿರು ನಾಟಕ ಪ್ರದರ್ಶನ ನಡೆಯಿತು. ಗ್ರಾಪಂ ಸದಸ್ಯ ಮರಿಯಪ್ಪ ಕಟ್ಟಿಮನಿ, ಪ್ರಮುಖರಾದ ಅಮರೇಶ ಪೂಜಾರಿ, ಯಂಕರಡ್ಡಿ ಮೇಟಿ, ಹನುಮಂತ ದ್ಯಾಪೂರಿ, ಮಲ್ಲೇಶ ಬಡಿಗೇರ, ಮುದುಕಪ್ಪ ಕುಂಬಾರ, ಅಮರೇಶ ಮೇಟಿ, ಆಶಾ ಕಾರ್ಯಕರ್ತೆಯರಾದ ಶೋಭಾ ಮೇಟಿ, ಸುವರ್ಣ ಪೂಜಾರಿ, ಶಾರದಾ ನಾಯಕ ಇದ್ದರು. 
ಜಿಲ್ಲೆ

ಹಾಸ್ಯ ಚಟಾಕಿ ಮೂಲಕ ಏಡ್ಸ್ ಜಾಗೃತಿ

ಪ್ರವೀಣ ಉದುಸಾ ದಲಬಂಜನ್

ಲಿಂಗಸುಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಶನಿವಾರ ಏಡ್ಸ್ ನಿಯಂತ್ರಣ ಜಾನಪದ ಕಲಾ ತಂಡದಿಂದ ಎಚ್‌ಐವಿ ಏಡ್ಸ್ ರೋಗ ನಿಯಂತ್ರಣದ ಕುರಿತು ಹಾಡುಗಳ ಮೂಲಕ ಕಿರು ನಾಟಕ ಪ್ರದರ್ಶನ ನಡೆಯಿತು.

ಜಿಪಂ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ, ಕೃಷ್ಣ ಪಾರಿಜಾತ ಸಂಘದ ಸಂಯುಕ್ತಾಶ್ರಯದಲ್ಲಿ ಏಡ್ಸ್ ಜನ ಜಾಗೃತಿ ಅಭಿಯಾನ ನಡೆಯಿತು. ಗ್ರಾಪಂ ಸದಸ್ಯ ಆದಪ್ಪ ಎನ್.ಮೇಟಿ ಚಾಲನೆ ನೀಡಿದರು.

ಜಾನಪದ ಕಲಾ ತಂಡದ ಮುಖ್ಯಸ್ಥ ಗ್ಯಾನಪ್ಪ ಯತ್ನಟ್ಟಿ ಹಾಗೂ ಸಂಗಡಿಗರು ಹಾಸ್ಯ ಚಟಾಕಿ ಹಾಗೂ ಹಾಡುಗಳ ಜತೆಗೆ ಏಡ್ಸ್ ರೋಗದ ಕುರಿತು ಜನರಲ್ಲಿ ತಪ್ಪು ಕಲ್ಪನೆ, ಕೀಳಾಗಿ ಕಾಣುವುದು, ರೋಗಿಗಳಿಗೆ ಧೈರ್ಯ ತುಂಬುವುದು, ಸೂಕ್ತ ಚಿಕಿತ್ಸೆ ಮೂಲಕ ನಿಯಂತ್ರಣ ಸೇರಿ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸಿದರು.

ಕಲಾವಿದರಾದ ವೆಂಕಣ್ಣ ಜೋಗಿನ್, ಪರಪ್ಪ ಕುಂಬಾರ, ಭೀಮಸಿ ಕಂಬಾರ, ಬಸಯ್ಯ ಹುಲಕುಂದ, ಪಾರ್ವತಿ ಲೋಕಾಪುರ, ಶಾಂತವ್ವ ಅಲಗತ್ತಿ, ತಾಯವ್ವ ಕಜ್ಜಿದೋಣಿ ಅಭಿನಯಿಸಿದರು.

ಗ್ರಾಪಂ ಸದಸ್ಯ ಮರಿಯಪ್ಪ ಕಟ್ಟಿಮನಿ, ಪ್ರಮುಖರಾದ ಅಮರೇಶ ಪೂಜಾರಿ, ಯಂಕರಡ್ಡಿ ಮೇಟಿ, ಹನುಮಂತ ದ್ಯಾಪೂರಿ, ಮಲ್ಲೇಶ ಬಡಿಗೇರ, ಮುದುಕಪ್ಪ ಕುಂಬಾರ, ಅಮರೇಶ ಮೇಟಿ, ಆಶಾ ಕಾರ್ಯಕರ್ತೆಯರಾದ ಶೋಭಾ ಮೇಟಿ, ಸುವರ್ಣ ಪೂಜಾರಿ, ಶಾರದಾ ನಾಯಕ ಇತರರಿದ್ದರು.