ಜಿಲ್ಲೆ

ರಾಜ್ಯ ಸರ್ಕಾರ ಆರ್ಯ ಈಡಿಗ ನಿಗಮ ಮಂಡಳಿ ಸ್ಥಾಪಿಸಲಿ; ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಆಗ್ರಹ

ಲಿಂಗಸುಗೂರು: ಆರ್ಯ ಈಡಿಗ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಏಳಿಗೆ ಹೊಂದಲು ರಾಜ್ಯ ಸರ್ಕಾರ ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ರೂ. ಮೀಸಲಿರಿಸಬೇಕೆಂದು ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ಮುಖಂಡರು ಎಸಿ ರಾಜಶೇಖರ ಡಂಬಳಗೆ ಮನವಿ ಸಲ್ಲಿಸಿದರು.

ರಾಜ್ಯದ ಈಡಿಗ ಮತ್ತು ಬಿಲ್ಲವ ಸೇರಿ 26 ಉಪಪಂಗಡಗಳಿದ್ದು, ಅಂದಾಜು ಒಂದು ಕೋಟಿ ಜನಸಂಖ್ಯೆ ಹೊಂದಿದೆ. ಸಮುದಾಯವು ಸ್ವಂತ ಜಮೀನಿಲ್ಲದೆ ದೊಡ್ಡ ಪ್ರಮಾಣದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಶೇ.75ಕ್ಕಿಂತ ಅಧಿಕ ಜನರು ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಹೀಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಎಂದು ಒತ್ತಾಯಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಗುತ್ತೇದಾರ, ಮುಖಂಡರಾದ ವೆಂಕಟೇಶಪ್ಪ ಗುತ್ತೇದಾರ, ಸೋಮಲಿಂಗಪ್ಪ ಗುತ್ತೇದಾರ, ಬಸವರಾಜ ಗುತ್ತೇದಾರ, ಶಿವಯ್ಯ, ಶಂಕರಪ್ಪ, ದೇವೇಂದ್ರಪ್ಪ, ರಮೇಶ, ಶೇಖರಪ್ಪ, ವೆಂಕಟೇಶ, ರಾಜು, ಗದ್ದೆಯ್ಯ, ಕುಪ್ಪಯ್ಯ, ವಿಠ್ಠಲ ಇದ್ದರು.