ಜಿಲ್ಲೆ

146 ಮನೆಗಳು ಹಾನಿ, ಬೆಳೆಗಳು ಜಲಾವೃತ

ಲಿಂಗಸುಗೂರು: ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾನುವಾರದವರೆಗೆ ತಾಲೂಕಿನ 12 ಗ್ರಾಮಗಳಲ್ಲಿ ಒಟ್ಟು 146 ಮನೆಗಳು ಬಿದ್ದಿದ್ದು, ಐದಬಾವಿ ಗ್ರಾಮದಲ್ಲಿ ಒಂದು ಜಾನುವಾರು ಸತ್ತಿದೆ.

ತಾಲೂಕಿನ ಗುಡದನಾಳ, ಯಲಗಲದಿನ್ನಿ, ಬೆಂಡೋಣಿ, ಸರ್ಜಾಪುರ ಸೇರಿದಂತೆ ನಾನಾ ಗ್ರಾಮಗಳ ವ್ಯಾಪ್ತಿಯ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬೆಂಡೋಣಿ ಮತ್ತು ತೊಂಡಿಹಾಳ ಗ್ರಾಮಗಳಲ್ಲಿ ಹಳ್ಳದ ನೀರು ಕಬ್ಬಿನ ಗದ್ದೆಗೆ ನುಗ್ಗಿದೆ. ಕೆಲವೆಡೆ ಸಜ್ಜೆ, ತೊಗರಿ ಬೆಳೆಗಳು ಜಲಾವೃತಗೊಂಡಿವೆ. ರಸ್ತೆಗಳ ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ಕೆಸರು ಗದ್ದೆಯಂತಾಗಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಪಟ್ಟಣದ ಪುರಸಭೆ ವ್ಯಾಪ್ತಿಯ ನಾನಾ ವಾರ್ಡುಗಳ ಸಿಸಿ ರಸ್ತೆ ಕಾಣದ ರಸ್ತೆಗಳು ಕೆಸರು ಗದ್ದೆಯಂತಾಗಿವೆ