ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ರೈತ ಕೃಷಿ ಕಾರ್ಮಿಕ ಸಂಘಟನೆ ಮತ್ತು ಎಐಡಿವೈಒ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಶರಣಪ್ಪ ಉದ್ಭಾಳ, ತಿರುಪತಿ, ಮಲ್ಲನಗೌಡ, ಚಂದ್ರಶೇಖರ ಸಾಹುಕಾರ, ಶರಣಪ್ಪ ಇತರರಿದ್ದರು. 
ಜಿಲ್ಲೆ

ತೊಗರಿ ಖರೀದಿ ಕೇಂದ್ರ ಶೀಘ್ರ ತೆರೆಯಿರಿ

ಲಿಂಗಸುಗೂರು : ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಸಂಘಟನೆ ಮುಖಂಡರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಗುರುವಾರ ಮನವಿ ಸಲ್ಲಿಸಿದರು.

ತೊಗರಿ ಬೆಲೆ ಕುಸಿತದ ಪರಿಣಾಮ ಕೇಂದ್ರ ಸರ್ಕಾರ ಬೆಂಬಲ ಬೆಲೆ ಆಧಾರದಲ್ಲಿ ಪ್ರತಿ ಕ್ವಿಂಟಾಲ್‌ಗೆ 7,550 ರೂ. ನಿಗದಿಗೊಳಿಸಿದ್ದು, ರಾಜ್ಯ ಸರ್ಕಾರ ರೈತರ ಒತ್ತಡ ಮೇರೆಗೆ ಪ್ರತಿ ಕ್ವಿಂಟಾಲ್‌ಗೆ 450 ರೂ. ಪ್ರೋತ್ಸಾಹಧನ ನೀಡುವುದಾಗಿ ಆದೇಶಿಸಿದೆ. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗಾಗಿ ಕಳೆದ ತಿಂಗಳು ರೈತರಿಂದ ಅರ್ಜಿ ಸ್ವೀಕರಿಸಿ ಖರೀದಿ ಆರಂಭಿಸುವುದಾಗಿ ಹೇಳಿದ್ದರೂ ಈವರೆಗೆ ಕೇಂದ್ರ ಆರಂಭಿಸಿಲ್ಲ. ರೈತರಿಂದ ಅರ್ಜಿ ಪಡೆಯುವ ಪ್ರಕ್ರಿಯೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಬಹಳ ಕಡಿಮೆಯಿದ್ದು, ಗರಿಷ್ಠ ಮಿತಿ ಖರೀದಿಸಲು ಅವಕಾಶ ಕಲ್ಪಿಸಬೇಕು. ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂ.ನಂತೆ ಖರೀದಿಸಬೇಕೆಂದು ಒತ್ತಾಯಿಸಿದರು.

ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ, ಜಿಲ್ಲಾ ಉಪಾಧ್ಯಕ್ಷ ತಿರುಪತಿ, ಕಾರ್ಯದರ್ಶಿ ಮಲ್ಲನಗೌಡ, ಚಂದ್ರಶೇಖರ ಸಾಹುಕಾರ, ಶರಣಪ್ಪ, ಈರಣ್ಣ, ಬಾಲಾಜಿ ಸಿಂಗ್, ದೇವಪ್ಪ, ಶರಣಪ್ಪ ಹೊಸಗೌಡರ, ಬಸವರಾಜ ಕವಿತಾಳ, ವೀರಭದ್ರಪ್ಪ ಇದ್ದರು.