ಜಿಲ್ಲೆ

ಎಂಟು ಜನರ ವಿರುದ್ಧ ಪ್ರಕರಣ ದಾಖಲು

ಶ್ರೀನಾಥ

ಲಿಂಗಸುಗೂರು: ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಎರಡು ಬಣಗಳ ನಡುವೆ ನಡೆದ ಗಲಾಟೆ ಹೊಸ ರೂಪ ಪಡೆದುಕೊಂಡಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳವಾರ ಮಧ್ಯಾಹ್ನ 12-30 ರ ಹೊತ್ತಿಗೆ ಗೊರೇಬಾಳ ಗ್ರಾಮದಲ್ಲಿ ಆಯೋಜಿಸಿದ್ದ ವಿಎಸ್‌ಎಸ್‌ಎನ್ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಿದ್ದ ಎಂಎಲ್‌ಸಿ ಶರಣಗೌಡ ಪಾಟೀಲ ಬಯ್ಯಪೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಅವರು ಗ್ರಾಮದಿಂದ ಮರಳುತ್ತಿರುವಾಗ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಕೈ-ಕೈ ಮಿಲಾಯಿಸಿ ಗಲಾಟೆ ನಡೆದಿದೆ.

ಇದು ಗುರಗುಂಟಾ ಗ್ರಾಮದ ಗೋವಿಂದ ನಾಯಕ ಅವರ ಕುಮ್ಮಕ್ಕಿನಿಂದ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಹಾಲಭಾವಿ ಪ್ರೇಮಗೌಡ, ಚನ್ನಬಸವ, ಶಿವರಾಜ, ಮಂಜುನಾಥ, ಹನಮಗೌಡ ಹಾಗೂ ಆನೆಹೊಸೂರು ಸಂಗಮೇಶ, ಹಿರೇ ಉಪ್ಪೇರಿ ಗ್ರಾಮದ ದೇವಪ್ಪ ಹಾಗೂ ಗೋವಿಂದ ನಾಯಕ ವಿರುದ್ಧ ಹಾಲಭಾವಿ ಗ್ರಾಮದ ಜಗದೀಶಗೌಡ ಲಿಂಗಸುಗೂರು ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.