ಲಿಂಗಸುಗೂರು: ತಾಲೂಕಿನ ರಾಮಲೂಟಿ ಗ್ರಾಮದ ಸಮೀಪದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಮೇಕೆಗಳ ಸಹಿತ ಸಿಲುಕಿಕೊಂಡಿದ್ದ ಕುರಿಗಾಹಿಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ.
ತಾಲೂಕಿನ ರಾಮಲೂಟಿ ಗ್ರಾಮದ ಬಸಪ್ಪ ಅಮರಪ್ಪ 30 ಕುರಿ, ಮೇಕೆಗಳನ್ನು ಮೇಯಿಸಲು ಶನಿವಾರ ಕೃಷ್ಣಾ ನದಿ ನಡುಗಡ್ಡೆ ಪ್ರದೇಶಕ್ಕೆ ತೆರಳಿದ್ದ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ, ಆತ ನಡುಗಡ್ಡೆಯಲ್ಲೇ ಸಿಲುಕಿಕೊಂಡಿದ್ದ. ವಿಷಯ ತಿಳಿದ ತಾಲೂಕು ಆಡಳಿತ ಅಗ್ನಿ ಶಾಮಕ ಮತ್ತು ಎನ್‌ಡಿಆರ್‌ಎಫ್ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು, ಕುರಿ, ಮೇಕೆಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಹೊನ್ನಪ್ಪ ಭಾನುವಾರ ತಿಳಿಸಿದ್ದಾರೆ.