ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿನ ಘಟಕವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು. ಸಾರಿಗೆ ಇಲಾಖೆ ಎಇಇ ಅಣ್ಣಪ್ಪ, ಡಿಪೋ ವ್ಯವಸ್ಥಾಪಕ ರಮೇಶ ದೊಡ್ಡಮನಿ, ಪಿಐ ಪುಂಡಲೀಕ ಪಟಾತ್ತಾರ, ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ವಕೀಲ, ಮುಂಖಂಡರಾದ ಹುಲ್ಲೇಶ ಸಾಹುಕಾರ, ಕೆ.ನಾಗಭೂಷಣ, ರಾಜು ತಂಬಾಕೆ ಇತರರಿದ್ದರು. 
ಜಿಲ್ಲೆ

ಘಟಕ ನಿರ್ವಹಣೆಗೆ ನಿರ್ದೇಶನ

ಲಿಂಗಸುಗೂರು: ಪಟ್ಟಣದ ಸಾರಿಗೆ ಡಿಪೋ ಮತ್ತು ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ಶುದ್ಧ ಕುಡಿವ ನೀರಿನ ಘಟಕಗಳನ್ನು ಶಾಸಕ ಮಾನಪ್ಪ ವಜ್ಜಲ ಸೋಮವಾರ ಉದ್ಘಾಟಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 2023-24 ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಮತ್ತು ಮೈಕ್ರೋ ಯೋಜನೆಯಡಿ ತಲಾ 12.50 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಬಸ್ ನಿಲ್ದಾಣ ಅನೇಕ ನಗರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿದ್ದು, ನಿತ್ಯ ನೂರಾರು ಪ್ರಯಾಣಿಕರು ಸಂಚರಿಸುತ್ತಾರೆ. ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣದಿಂದ ಪ್ರಯಾಣಿಕರಿಗೆ ಹಾಗೂ ಸಾರಿಗೆ ಡಿಪೋದಲ್ಲಿ ನಿರ್ಮಿಸಿದ ಘಟಕದಿಂದ ಅಧಿಕಾರಿ, ಸಿಬ್ಬಂದಿ, ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳಿಗೆ ಅನುಕೂಲವಾಗಲಿದೆ. ಘಟಕಗಳ ನಿರ್ವಹಣೆ ಬಗ್ಗೆ ಸಾರಿಗೆ ಸಂಸ್ಥೆ ಗಮನ ಹರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.