ಲಿಂಗಸುಗೂರಿನಲ್ಲಿ ಹರ್‌ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೈಕ್ ರ‌್ಯಾಲಿ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಪ್ರಮುಖರಾದ ಈಶ್ವರ ವಜ್ಜಲ, ಹುಲ್ಲೇಶ ಸಾಹುಕಾರ, ಜಗನ್ನಾಥ ಕುಲಕರ್ಣಿ, ಎಚ್.ವಿ.ಪವಾರ, ರತ್ನಮ್ಮ ಸಕ್ರಿ, ಜ್ಯೋತಿ ಸುಂಕದ ಇತರರಿದ್ದರು. 
ಜಿಲ್ಲೆ

ಸ್ವಾತಂತ್ರೃ ಹೋರಾಟಗಾರರ ಸೇವೆ ಸ್ಮರಣೀಯ

ಪ್ರವೀಣ ಉದುಸಾ ದಲಬಂಜನ್

ಲಿಂಗಸುಗೂರು: ರಾಷ್ಟ್ರಧ್ವಜ ನಮ್ಮ ದೇಶದ ಹೆಮ್ಮೆ ಹಾಗೂ ಗೌರವವಾಗಿದ್ದು ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯರ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವುದರಿಂದ ದೇಶ ಪ್ರೇಮ ಪ್ರಜ್ವಲಿಸುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ ಹೇಳಿದರು.

ಪಟ್ಟಣದಲ್ಲಿ ಬುಧವಾರ ಹರ್‌ಘರ್ ತಿರಂಗಾ ಅಭಿಯಾನ ಅಂಗವಾಗಿ ಬೈಕ್ ರ‌್ಯಾಲಿಯಲ್ಲಿ ಮಾತನಾಡಿದರು. ದೇಶ ಸ್ವಾತಂತ್ರ್ಯ ಹೋರಾಟದ ವೇಳೆ ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸಿ ಹಲವು ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ. ಸ್ವಾತಂತ್ರೃ ಹೋರಾಟಗಾರರ ಸೇವೆ ಸ್ಮರಣೀಯವಾಗಿದೆ ಎಂದರು. ಪಟ್ಟಣದ ಬೀರೇಶ್ವರ ದೇವಸ್ಥಾನದಿಂದ ಬಸವಸಾಗರ ಸರ್ಕಲ್, ಬಸ್ ನಿಲ್ದಾಣ ಸರ್ಕಲ್, ಗಡಿಯಾರ ಚೌಕ್ ಮೂಲಕ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.