ಲಿಂಗಸುಗೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯ ಪವಿತ್ರ ಈದ್-ಉಲ್-ಫಿತ್ರ್ (ರಂಜಾನ್) ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ರಂಜಾನ್ ಪ್ರಯುಕ್ತ ತಿಂಗಳ ಪರ್ಯಂತ ಬೆಳಗ್ಗೆಯಿಂದ ಸೂರ್ಯಾಸ್ತದವರೆಗೆ ಉಪವಾಸ ವ್ರತಾಚರಣೆ ಕೈಗೊಂಡಿದ್ದ ಮುಸ್ಲಿಮರು ರಂಜಾನ್ ಕೊನೆಯ ದಿನವಾದ ಸೋಮವಾರ ಅಂತ್ಯಗೊಳಿಸಿದರು. ಬೆಳಗ್ಗೆ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳಿ ದೇಶದಲ್ಲಿ ಶಾಂತಿ ನೆಲೆಸಲಿ, ಸಮಾಜದಲ್ಲಿ ಪರಸ್ಪರ ಸೌಹಾರ್ದತೆ ಮನೆ ಮಾಡಲಿ, ಸಕಲ ಜೀವರಾಶಿಗಳಿಗೆ ಅಲ್ಹಾ ಒಳಿತು ಮಾಡಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆಗೆ ತೆರಳಿ ಹಬ್ಬದ ಭೋಜನ ಸವಿದರು.
ಪ್ರಮುಖರಾದ ಖಾಜಿ ಮೊಹ್ಮದ್ ಯೂನುಸ್, ಖಾದರ್‌ಪಾಷಾ, ಮೊಹ್ಮದ್ ರಫೀ, ಅನೀಸ್ ಪಾಷಾ, ಫಯಾಜ್ ಮನಿಯಾರ್, ಹುಸೇನಸಾಬ, ಅಮೀನುದ್ದೀನ್, ಖಾಜಾಹುಸೇನ್, ಅಕ್ತರ್ ಪಾಷಾ, ಇಸ್ಮಾಯಿಲ್ ಸಾಬ, ಹಾರೂನ್, ಇಕ್ಬಾಲ್ ಇತರರಿದ್ದರು.