ಶರಣಪ್ಪ ಮೇಟಿ 
ಜಿಲ್ಲೆ

ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ

ಶ್ರೀನಾಥ

ಲಿಂಗಸುಗೂರು: ಬಸವಾದಿ ಶರಣರ ಚಿಂತನೆಗಳನ್ನು ಜನಮನದಲ್ಲಿ ಬಿತ್ತುವ ಸದುದ್ದೇಶದಿಂದ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಆರಂಭವಾಗಿದ್ದು, ಸೆ.5 ರಂದು ರಾಯಚೂರಿಗೆ ಆಗಮಿಸಲಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ ಅವರನ್ನು ಸರ್ಕಾರ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿ ಒಂದು ವರ್ಷ ಪೂರೈಸಿದೆ.

ಈ ಹಿನ್ನೆಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದು, ಸೆ.4ರಂದು ರಾಯಚೂರು ಬಸವ ವೃತ್ತದಿಂದ ಗಂಜ್ ಕಲ್ಯಾಣ ಮಂಟಪದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ.

ಸಂಜೆ 6 ಗಂಟೆಗೆ ನಡೆವ ಕಾರ್ಯಕ್ರಮದಲ್ಲಿ ಸಂವಾದ, ಸಭೆ, ಉಪನ್ಯಾಸ, ನಾಟಕ ಪ್ರದರ್ಶನವಿರಲಿದೆ. ಸಾರ್ವಜನಿಕರು, ಪ್ರಗತಿಪರರು, ಜನಪ್ರತಿನಿಧಿಗಳು, ಬಸವಪರ ಸಂಘಟನೆಗಳು ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಹಿರಿಯ ವೈದ್ಯ ಶಿವಬಸಪ್ಪ ಹೆಸರೂರು ಮಾತನಾಡಿ, ಬಸವಣ್ಣ ಅವರು ಕರ್ನಾಟಕ ಮಾತ್ರವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕ. ಸಮ ಸಮಾಜವನ್ನು ನೆಲೆಗೊಳಿಸಿದವರು. ಅಭಿಯಾನ ಮೂಲಕ ಬಸವಾದಿ ಶರಣರ ಚಿಂತನೆಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಪ್ರಮುಖರಾದ ಅಮರಗುಂಡಪ್ಪ ಮೇಟಿ, ಬಸವಂತರಾಯ ಕುರಿ, ಮಹಾಂತೇಶ ಪಾಟೀಲ್, ಸಂಗಣ್ಣ ಹೊಸೂರು, ಎನ್.ಬಸವರಾಜ, ನಿಂಗಣ್ಣ ಕುಂಬಾರ ಇದ್ದರು.