ಜಿಲ್ಲೆ

ಹಿಂದುಗಳ ಹತ್ಯಾಕಾಂಡಕ್ಕೆ ಶ್ರೀರಾಮ ಸೇನೆ ಖಂಡನೆ

ಲಿಂಗಸುಗೂರು: ಬಾಂಗ್ಲಾ ದೇಶದಲ್ಲಿ ಹಿಂದುಗಳ ಹತ್ಯಾಕಾಂಡ ಮತ್ತು ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿ ಖಂಡಿಸಿ ಶ್ರೀರಾಮ ಸೇನೆ ಸಂಘಟನೆ ಮುಖಂಡರು ಎಸಿ ಕಚೇರಿ ನೌಕರ ರಾಜಕುಮಾರಗೆ ಬುಧವಾರ ಮನವಿ ಸಲ್ಲಿಸಿದರು.

ನವರಾತ್ರಿ ವೇಳೆ ದುರ್ಗಾ ಪೂಜೆಯ ಸಾವಿರಾರು ಮಂಟಪಗಳು ಮತ್ತು ಇಸ್ಕಾನ್ ಮಂದಿರದ ಮೇಲೆ ಆಕ್ರಮಣ ಮತ್ತು ಹಿಂದುಗಳ ಹತ್ಯಾಕಾಂಡ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವರು ಬಾಂಗ್ಲಾ ದೇಶದ ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.

ಸೇನೆಯ ತಾಲೂಕು ಪದಾಧಿಕಾರಿಗಳಾದ ಶಿವರಾಜ್ ನಾಯಕ್, ಮುತ್ತುರಾಜ್, ರಾಹುಲ್, ಚಂದ್ರು ಗೊರೇಬಾಳ, ಅಮರೇಶ, ಪ್ರಕಾಶ, ಮೌನೇಶ, ರಾಜು, ರವಿಕುಮಾರ, ಅಭಿಷೇಕ್, ರಮೇಶ ಸೇರಿದಂತೆ ಇತರರಿದ್ದರು.