ಜಿಲ್ಲೆ

ಮೈಸೂರು ತಾಲೂಕು ಕೃಷಿಕ ಸಮಾಜಕ್ಕೆ ಲಿಂಗರಾಜು ಅಧ್ಯಕ್ಷ

ಮೈಸೂರು: ಮೈಸೂರು ತಾಲೂಕು ಕೃಷಿಕ ಸಮಾಜಕ್ಕೆ 2025 ರಿಂದ 30ರವರೆಗೆ ಐದು ವರ್ಷಗಳ ಅವಧಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷರೂ ಅದ ಕುಂಬಾರಕೊಪ್ಪಲಿನ ಕೆ.ಬಿ. ಲಿಂಗರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹಾರೋಹಳ್ಳಿ ಎನ್. ಮಹಾದೇವಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚುಂಚರಾಯನ ಹುಂಡಿ ಸಿ.ಜಿ. ಶಿವಶಂಕರ್, ಖಜಾಂಚಿಯಾಗಿ ಇಲವಾಲ ಗೋವಿಂದಸ್ವಾಮಿ, ಜಿಲ್ಲಾ ಪ್ರತಿನಿಧಿಯಾಗಿ ಚಿಕ್ಕಹಳ್ಳಿ ಎಂ. ಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಕಲ್ಲೂರು ನಾಗನಹಳ್ಳಿ ಕೆ. ಬಸವರಾಜು, ಕುಂಬಾರಕೊಪ್ಪಲು ಶಿವಮಾದು, ಕೀಳನಪುರ ಕೆ.ಎಸ್. ಮಾದಪ್ಪ, ಮಾಧವಗೆರೆ ಎಂ. ರವಿ, ಎಂ.ಎಲ್. ಲಿಂಗರಾಜ್, ತಳೂರು ಟಿ.ಪಿ. ನಂಜುಂಡಸ್ವಾಮಿ, ಕುಂಬಾರಕೊಪ್ಪಲು ದೇವರಾಜೇಗೌಡ ಅವರ ಆಯ್ಕೆಯಾದರು.

ಮೈಸೂರು ತಾಲೂಕು ಕೃಷಿ ಸಮಾಜದ ಹಾಗೂ ಸಹಾಯಕ ಕೃಷಿ ನಿರ್ದೇಶಕ ಬಿ.ಡಿ.ಜಯರಾಮು ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.