ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾ ಲಯ ಹಾಗೂ ವಿಜಯಪುರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಸೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಂತಿಮ ಪುರುಷರ ಪಂದ್ಯದಲ್ಲಿ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲ ಯದ ಕ್ರೀಡಾಪಟುಗಳು ಕೆಎಲ್ಇ ಸಂಸ್ಥೆಯ ಆರ್.ಎಲ್.ವಿಜ್ಞಾನ ಮಹಾವಿದ್ಯಾಲಯದ ತಂಡ ವನ್ನು ಸೋಲಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುಲಾರಾಮ ಚೌದರಿ ಮತ್ತು ಓಂಕಾರ ಕಳಸಣ್ಣವರ ಯುನಿ ವರ್ಸಿಟಿ ಬ್ಲೂ ಪ್ರಶಸ್ತಿಗೆ ಭಾಜನರಾದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮಾರಾವ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.