ಮಳವಳ್ಳಿ ತಾಲೂಕಿನ ನೇಣನೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಭುಲಿಂಗಸ್ವಾಮೀಜಿ, ಸೋಮಶೇಖರ ಶ್ರೀಗಳಿಂದ ಲಿಂಗದೀಕ್ಷೆ ಪಡೆದರು. ಶಿವಕುಮಾರ್, ಮಲ್ಲೇಶ್, ಸುರೇಶ್, ಕನ್ನಳ್ಳಿ ಸುರೇಶ್ ಇತರರು ಇದ್ದರು. 
ಜಿಲ್ಲೆ

ನೇಣನೂರು ಗ್ರಾಮದಲ್ಲಿ ಸಾಮೂಹಿಕ ಲಿಂಗಧಾರಣೆ

ಮಳವಳ್ಳಿ: ತಾಲೂಕಿನ ನೇಣನೂರು ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಧಾರ್ಮಿಕ ದತ್ತಿ ಕಾರ್ಯಕ್ರಮದಲ್ಲಿ ಸಾಮೂಹಿಕ ಲಿಂಗಧಾರಣೆ ಹಾಗೂ ಶಿವಪೂಜೆ ನೆರವೇರಿಸಲಾಯಿತು.

ಗ್ರಾಮದ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಶರಣರ ಲಿಂಗಧಾರಣೆ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜನರು ಲಿಂಗದೀಕ್ಷೆ ಪಡೆದುಕೊಂಡರು. ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದ ಪ್ರಭುಲಿಂಗ ಸ್ವಾಮೀಜಿ ಹಾಗೂ ಶ್ರೀಮಠದ ಸೋಮಶೇಖರ ಶ್ರೀಗಳು ಲಿಂಗಪೂಜಾ ವಿಧಿವಿಧಾನಗಳ ಬಗ್ಗೆ ದೀಕ್ಷೆ ಪಡೆದ ಭಕ್ತರಿಗೆ ಮಂತ್ರೋಪದೇಸಗಳನ್ನು ನೀಡಿದರು.

ಬಸವೇಶ್ವರ ದೇವಸ್ಥಾನದ ಅರ್ಚಕ ಶಿವಕುಮಾರ್, ವೀರಶೈವ ಮಹಾಸಭಾ ನಿರ್ದೇಶಕರಾದ ಮಲ್ಲೇಶ್, ಸುರೇಶ್, ಕನ್ನಳ್ಳಿ ಸುರೇಶ್, ತೆಂಕಳ್ಳಿ ಮಹೇಶ್, ಚಿಕ್ಕಬಾಗಿಲು ಪದ್ಮಾ, ಡೇರಿ ಮಹೇಶ್, ಹಳದಾಸನಹಳ್ಳಿ ತಾಂಡವಮೂರ್ತಿ, ಬೆಳಕವಾಡಿ ನಾಗರಾಜು, ಹೊಸಹಳ್ಳಿ ಮಧಮಾಲಿನಿ, ಅನ್ನಪೂರ್ಣ, ನಿವೃತ್ತ ಯೋಧ ಸುರೇಶ್ ಇದ್ದರು.