ಗಂಗೊಳ್ಳಿ: ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯುತ್ ಜನರಿಗೆ ಎಷ್ಟು ಅವಲಂಬಿತವಾಗಿದೆಯೋ, ಅದೇ ರೀತಿ ಅದರಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಅಷ್ಟೇ ಅಪಾಯವಿದೆ. ನಾವು ಲೈನ್‌ಮನ್‌ಗಳನ್ನು ಯೋಧರಂತೆ ನೋಡಬೇಕು ಎಂದು ಕರ್ನಾಟಕ ಹ್ಯೂಮನ್ ರೈಟ್ಸ್, ವುಮೆನ್ ಚೈಲ್ಡ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ.ನಿರಂಜನ್ ಶೆಟ್ಟಿ ಹೇಳಿದರು.
ಕರ್ನಾಟಕ ಹ್ಯೂಮನ್ ರೈಟ್ಸ್, ವುಮೆನ್ ಚೈಲ್ಡ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕುಂದಾಪುರ ಭಾಗದ ವಿದ್ಯುತ್ ಲೈನ್‌ಮನ್‌ಗಳನ್ನು ಸನ್ಮಾನಿಸಿ ಮಾತನಾಡಿದರು.
ಮಳೆಗಾಲ, ಬೇಸಿಗೆ ಕಾಲದಲ್ಲಿ ಎಡಬಿಡದೆ ಸಾರ್ವಜನಿಕರ ಸೇವೆಯಲ್ಲಿ ಸದಾ ತಲ್ಲೀನರಾಗುತ್ತಾರೆ. ಅದೆಷ್ಟೋ ಜನ ಜನರ ಸೇವೆ ನಮ್ಮ ಸೇವೆ ಎಂದು ನಂಬಿ ಅದೇ ಉದ್ಯೋಗದಲ್ಲಿದ್ದಾರೆ. ಅವರನ್ನು ಗುರುತಿಸಿ ಗೌರವಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಹ್ಯೂಮನ್ ರೈಟ್ಸ್ ರಾಜ್ಯ ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಆಶಾ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಸುಂದರ ಶೆಟ್ಟಿ ಸುನೀಲ್ ಇನ್ನಿತರರು ಉಪಸ್ಥಿತರಿದ್ದರು. ಹ್ಯೂಮನ್ ರೈಟ್ಸ್ ನ್ಯಾಷನಲ್ ಸಂಸ್ಥೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ.ನಿರಂಜನ್ ಶೆಟ್ಟಿ ಅವರನ್ನು ಗೌರವಿಸಲಾಯಿತು.