ಬಳ್ಳಾರಿ: ಜೆಸ್ಕಾಂ ನೌಕರರೊಬ್ಬರು ಮೃತಪಟ್ಟಿರುವ ಘಟನೆ ಕಂಪ್ಲಿ ತಾಲೂಕಿನ ಇಟಗಿ ಗ್ರಾಮದಲ್ಲ ಶುಕ್ರವಾರ ರಾತ್ರಿ ನಡೆದಿದೆ.
ಹನುಮಂತ (35) ಮೃತಪಟ್ಟ ದುರ್ದೈವಿ. ಶುಕ್ರವಾರ ರಾತ್ರಿ ವಿದ್ಯುತ್ ದುರಸ್ತಿ ಸರಿಪಡಿಸಲು ಹನಮಂತ ಕಂಬವೇರಿದ್ದ. ದುರಸ್ಥಿ ಮಾಡುವಾಗ ವಿದ್ಯುತ್ ತಂತಿ ತಗುಲಿ ಕಂಬದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಬೆನ್ನು ಮಾಡಿ ಬಿದ್ದಿದ್ದರಿಂದ ತಲೆ ಹಿಂಬಂದಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಂಪ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)