ಜಿಲ್ಲೆ

ಸಿಡಿಲು ಬಡಿದು ಆಕಳು ಮೃತ

ರುದ್ರಪ್ಪ ವಾಲಿ

ಹರಪನಹಳ್ಳಿ : ತಾಲೂಕಿನಾದ್ಯಂತ ಶುಕ್ರವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ಲಕ್ಷ್ಮೀಪುರ ತಾಂಡದ ಹರೀಶ್ ನಾಯ್ಕ ಅವರ ಆಕಳು ಸಿಡಿಲು ಬಡಿದು ಮೃತಪಟ್ಟಿದೆ.

ತಾಲೂಕಿನ ಬಂಡ್ರಿತಾಂಡದ ಕೊಟ್ರೀಬಾಯಿ, ಚಿಗಟೇರಿ ಗ್ರಾಮದ ಉತ್ತಂಗಿ ದೀಪಾ, ಅರಸೀಕೆರೆ ಗ್ರಾಮದ ನಿಂಗಪ್ಪ, ಕುಣೇಮಾದಿಹಳ್ಳಿ, ಹಿಕ್ಕಿಮಗೇರಿ, ಕೆಸರಹಳ್ಳಿ ಗ್ರಾಮದ ದುರುಗಪ್ಪ, ದಡಿಗಾರನಹಳ್ಳಿ ಗ್ರಾಮದ ಅಂಬ್ಲಿ ರಾಮಪ್ಪ, ಬಸವನಾಳು ಗ್ರಾಮದ ಕೊಟ್ರೇಶ, ಶ್ರೀ ಕಂಠಾಪುರ ಗ್ರಾಮದ ಅಣ್ಣಪ್ಪ, ಗಜಾಪುರ ಗ್ರಾಮದ ಶಂಭುಲಿಂಗಯ್ಯ, ಹಾಗೂ ಕೂಲಹಳ್ಳಿ ಗ್ರಾಮದ ಗುರುವಿನ ಬಸವರಾಜ ಅವರ ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.

ಅರಸೀಕೆರೆ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು ಗೋಕಟ್ಟೆ, ಚೆಕ್ ಡ್ಯಾಂಗಳು, ಕೃಷಿ ಹೊಂಡಗಳು ತುಂಬಿದ್ದು ಅರಸೀಕೆರೆ, ಕಲ್ಲಹಳ್ಳಿ, ನಂದಿಕಂಬ, ಹಿರೇಮೇಗಳಗೇರಿ, ಕ್ಯಾರಕಟ್ಟೆ, ಪುಣಭಘಟ್ಟ, ಕವಲಹಳ್ಳಿ ಈ ಗ್ರಾಮಗಳಲ್ಲಿನ ಕೆರೆಗಳು ತುಂಬುವ ಹಂತಕ್ಕೆ ಬಂದಿವೆ. ಅತಿಯಾದ ಮಳೆಯಿಂದ ಮೆಕ್ಕೆಜೋಳ, ರಾಗಿ ಹಾಗೂ ಇತರ ಬೆಳೆಗೆ ಹಾನಿಯಾಗಿದೆ.