ಜಿಲ್ಲೆ

ಬಿಆರ್‌ಟಿಎಸ್ ಚಿಗರಿ ಬದಲು ಲೈಟ್ ಟ್ರಾಮ್ ಬಸ್...!

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಹುಬ್ಬಳ್ಳಿ- ಧಾರವಾಡ ನಡುವೆ ಎಚ್‌ಇಎಸ್‌ಎಸ್ ಲೈಟ್ ಟ್ರಾಮ್ ಸಾರಿಗೆ ಯೋಜನೆ ಅನುಷ್ಠಾನದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸುಳಿವು ನೀಡಿದ್ದರು. ಇತ್ತೀಚೆಗೆ ಫ್ರಾನ್ಸ್ಗೆ ತೆರಳಿದ್ದ ಸಚಿವ, ಹೆಸ್ ಲೈಟ್ ಟ್ರಾಮ್ ತಯÁರಿಕಾ ಕಂಪನಿಗೆ ಭೇಟಿ ನೀಡಿ ಯೋಜನೆಯ ಕಾರ್ಯವಿಧಾನ ಅಧ್ಯಯನ ಮಾಡಿದ್ದಾರೆ.

ಅವಳಿನಗರ ನಡುವಿನ ಬಿಆರ್‌ಟಿಎಸ್ ಯೋಜನೆಯ ಅವ್ಯವಸ್ಥೆಯಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನವಿದೆ. ಹೀಗಾಗಿ ಅವಳಿನಗರ ಮಧ್ಯೆ ಮೆಟ್ರೋ ರೈಲು, ಮೋನೋ ರೈಲು ಅಥವಾ ಟ್ರಾಮ್ ಸೇವೆ ಆರಂಭಿಸುವ ಒತ್ತಾಯವಿದೆ. ಬಿಆರ್‌ಟಿಎಸ್ ಚಿಗರಿ ಯೋಜನೆಯ ತೊಡಕನ್ನು ನಿವಾರಿಸಲು ಸಚಿವ ಲಾಡ್, ಲೈಟ್ ಟ್ರಾಮ್‌ನಂಥ ಸಾರಿಗೆ ಆರಂಭಿಸಲು ಯೋಜಿಸಿದ್ದಾರೆ. ಹೆಸ್ ಕಂಪನಿಯ ಮುಖ್ಯಸ್ಥ ಪೌಲ್ ಜತೆ ಸಚಿವ ಲಾಡ್ ಲೈಟ್ ಟ್ರಾಮ್ ಯೋಜನೆಯ ಸಾಧಕ ಬಾಧಕಗಳನ್ನು ಚರ್ಚಿಸಿದ್ದಾರೆ.