ಬೆಳಕವಾಡಿ: ಕರೊನಾ ಸೋಂಕಿತ ವ್ಯಕ್ತಿ ವಾಸವಿದ್ದ ಬೆಳಕವಾಡಿಯ ಕೊಳ್ಳೇಗಾಲ ಮುಖ್ಯರಸ್ತೆಬದಿಯ 100 ಮೀಟರ್ ಸುತ್ತಲಿನ ಪ್ರದೇಶವನ್ನು ಗುರುವಾರ ಸೀಲ್‌ಡೌನ್ ಮಾಡಲಾಯಿತು.
ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಆತನನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದರು. ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಸೋಮು ಹಾಗೂ ಸಿಬ್ಬಂದಿ ಆತ ವಾಸವಿದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಿದರು.
ಸೋಂಕಿತ ವ್ಯಕ್ತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕಳೆದ ಮೂರು ದಿನಗಳ ಹಿಂದೆ ಕಂಪನಿಯಲ್ಲೇ ಕೋವಿಡ್ ಪರೀಕ್ಷೆಗೆ ಒಳಗಾಗಿ ಸ್ವಗ್ರಾಮ ಬೆಳಕವಾಡಿಗೆ ಬಂದಿದ್ದ ಎನ್ನಲಾಗಿದೆ. ಗುರುವಾರ ಪಾಸಿಟಿವ್ ಬಂದಿದೆ. ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಆತನನ್ನು ಕರೆದೊಯ್ದರು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಮುಂಜಾಗ್ರತೆಯಾಗಿ ಗ್ರಾಮದಲ್ಲಿ ಔಷಧ ಸಿಂಪಡಿಸಲಾಗಿದ್ದು, ಬೆಳಕವಾಡಿ ಪೊಲೀಸ್ ಠಾಣೆ ಪಿಎಸ್‌ಐ ಉಮಾವತಿ, ಕರೊನಾ ತಡೆ ನಿಯಮ ಪಾಲಿಸುವವಂತೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಿದರು.