ಮುದ್ದೇಬಿಹಾಳದ ಸಂತ ಕನಕದಾಸ ಶಾಲೆಯಲ್ಲಿ ಆಯೋಜಿಸಿದ್ದ ಪಟಾಕಿ ಬೇಡ ಅಭಿಯಾನವನ್ನು ನಾಗಭೂಷಣ ನಾವದಗಿ ಮತ್ತು ವಿದ್ಯಾರ್ಥಿಗಳು ಸಸಿಗೆ ನೀರೆರೆದು ಉದ್ಘಾಟಿಸಿದರು. ಬಿ.ಎಸ್​.ಮೇಟಿ, ಎಂ.ಎಸ್​.ಗಡೇದ, ಡಾ.ವೀರೇಶ ಇಟಗಿ, ನಾಗಪ್ಪ ರೂಢಗಿ, ನಾಗಭೂಷಣ ನಾವದಗಿ, ಅಶೋಕ ರೇವಡಿ, ಗೋಪಾಲ ಹೂಗಾರ ಇನ್ನಿತರರು ಇದ್ದರು. 
ಜಿಲ್ಲೆ

ಪಟಾಕಿ ಸಿಡಿಸದೆ ದೀಪ ಬೆಳಗಿ

ಗಿರೀಶ ಸಗರ

ಮುದ್ದೇಬಿಹಾಳ: ಮನುಷ್ಯನ ವಾಸಕ್ಕಿರುವುದು ಒಂದೇ ಭೂಮಿ. ನಮ್ಮ ಸ್ವಯಂಕೃತ ಅಪರಾಧಗಳಿಂದ ಭೂಮಿಯ ಪರಿಸರ ಹಾಳು ಮಾಡುವುದು ಬೇಡ ಎಂದು ಸಂತ ಕನಕದಾಸ ಕನ್ನಡ ಕಾನ್ವೆಂಟ್​ ಶಾಲೆ ಕಾರ್ಯದರ್ಶಿ ಬಿ.ಎಸ್​.ಮೇಟಿ ಹೇಳಿದರು.

ಪಟ್ಟಣದ ಸಂತ ಕನಕದಾಸ ಕನ್ನಡ ಕಾನ್ವೆಂಟ್​ ಶಾಲೆಯಲ್ಲಿ ಹಸಿರು ತೋರಣ ಗೆಳೆಯರ ಬಳಗದಿಂದ ಶನಿವಾರ ಆಯೋಜಿಸಿದ್ದ ದೀಪಾವಳಿ ಹಬ್ಬಕ್ಕೆ ಪಟಾಕಿ ಬೇಡ&ದೀಪ ಬೆಳಗೋಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಪಟಾಕಿ ಸಿಡಿಸದೆ ದೀಪ ಬೆಳಗಿ ಆಚರಿಸಬೇಕು ಎಂದರು.

ಬಳಗದ ಅಧ್ಯ ಡಾ.ವೀರೇಶ ಇಟಗಿ ಮಾತನಾಡಿ, ದೊಡ್ಡ ಶಬ್ದ ಹೊರಡಿಸುವ ಪಟಾಕಿಗಳಿಂದ ಪ್ರಾಣಿ, ಪ ಮಾತ್ರವಲ್ಲದೆ ಮನುಷ್ಯರಿಗೂ ತೊಂದರೆ. ಅದರಿಂದ ಹೊರಹೊಮ್ಮುವ ವಿಷಾನಿಲಗಳಿಂದ ಶ್ವಾಸಕೋಶ, ಕಣ್ಣು ಸೇರಿ ದೇಹದ ಭಾಗಗಳು ಗಂಭೀರ ಖಾಯಿಲೆಗೆ ತುತ್ತಾಗಬೇಕಾಗುತ್ತವೆ ಎಂದರು.

ಬಳಗದ ಸಂಚಾಲಕ ಎಂ.ಎಸ್​.ಗಡೇದ ಮಾತನಾಡಿ, ಪಟಾಕಿ ಸಿಡಿಸುವುದು ಶ್ರಮಪಟ್ಟು ದುಡಿದ ಹಣಕ್ಕೆ ಬೆಂಕಿ ಹಚ್ಚುವುದಕ್ಕೆ ಸಮ ಎಂದರು.

ತಾಲೂಕು ಕುರುಬರ ಸಂದ ನಿರ್ದೇಶಕ ನಾಗಪ್ಪ ರೂಢಗಿ, ಬಳಗದ ಮಾಜಿ ಅಧ್ಯರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಕಾರ್ಯದರ್ಶಿ ಬಿ.ಎಚ್​.ಬಳಬಟ್ಟಿ, ಉಪಾಧ್ಯ ಬಸವರಾಜ ಬಿಜ್ಜೂರ, ವೀರಶೆವ ಮಹಾಸಭಾ ಅಧ್ಯ ವೆಂಕನಗೌಡ ಪಾಟೀಲ, ಎಂ.ಎಸ್​.ಗೌಡರ, ಸುರೇಶ ಕಲಾಲ, ಸೋಮಶೇಖರ ಚೀರಲದಿನ್ನಿ, ಮುಖ್ಯಾಧ್ಯಾಪಕ ಬಿ.ಎಸ್​.ಣೇದಕಟ್ಟಿ, ಶಿಕರಾದ ಆರ್​.ಜಿ.ಮೆಣಸಗಿ, ಎಸ್​.ಎನ್​.ಸಜ್ಜನ, ಆರ್​.ವೈ.ಪಾಟೀಲ, ಆರ್​.ಎಸ್​.ವಾಲಿಕಾರ, ಲಕ್ಷಿ$್ಮ ಗುಬಚಿ, ಲತಾ ಮೇಟಿ, ಬಸಮ್ಮ ಬರದೇನಾಳ, ಜಿ.ಎಂ.ಹುಲಗಣ್ಣಿ ಇದ್ದರು.

ಮಾಣಿಕ್ಯಮ್ಮ ತಡಸದ ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎಂ.ಎನ್​.ಯರಝರಿ ಸ್ವಾಗತಿಸಿದರು. ಎಂ.ಸಿ.ಕಬಾಡೆ, ಗೋಪಾಲ ಹೂಗಾರ ನಿರ್ವಹಿಸಿದರು.