ಜಿಲ್ಲೆ

ಜೀವಿತಾವಧಿಯ ಸಹಾಯ ಚಿರಸ್ಥಾಯಿ: ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಅನಿಸಿಕೆ

Avinash R

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಜೀವನ ಶಾಶ್ವತ ಅಲ್ಲ, ಜೀವಿತಾವಧಿಯಲ್ಲಿ ನಾವು ಇನ್ನೊಬ್ಬರಿಗೆ ವಾಡುವ ಸಹಾಯ ಶಾಶ್ವತ. ಅಂತಹ ಗುಣ ನಮ್ಮಲ್ಲಿರಬೇಕು. ಆ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯ ಶ್ಲಾನೀಯ ಎಂದು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಭಿಪ್ರಾಯಪಟ್ಟರು.

ಬಂಧುತ್ವ ಚಾರಿಟೆಬಲ್ ಟ್ರಸ್ಟ್‌ನ ತೊಕ್ಕೊಟ್ಟು ನೂತನ ಕಚೇರಿ ಉದ್ಘಾಟನೆ, ಅಂಗನವಾಡಿಗೆ ಕುರ್ಚಿ ಹಾಗೂ ವಿದ್ಯಾರ್ಥಿಗಳಿಗೆ ಸಮವಸದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂದ ಮೈಸೂರು ವಿಭಾಗೀಯ ಕಾರ್ಯದರ್ಶಿ ತ್ಯಾಗಂ ಹರೇಕಳ ವಾತನಾಡಿ, ಮನುಷ್ಯ ಹುಟ್ಟಿದ ಬಳಿಕ ಸಾವು ಶಾಶ್ವತ, ಯಾರಿಗೂ ಸೇವೆ ನೀಡದಿದ್ದರೂ ತೊಂದರೆ ವಾಡದೆ ಸವಾಜಕ್ಕೆ ಕಳಂಕಿತರಾಗದೆ ಬದುಕುವುದು ಮುಖ್ಯ. ಅಶಕ್ತರು, ನಿರ್ಗತಿಕರು, ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶದಿಂದ ಹುಟ್ಟುಕೊಂಡಿರುವ ಟ್ರಸ್ಟ್ ಸಾವಾಜಿಕ ಚಿಂತನೆಯಿಂದ ಮುನ್ನಡೆಯಲಿ ಎಂದರು.

ಬಂಧುತ್ವ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ತೊಕ್ಕೊಟ್ಟು ಮಸ್ಜಿದುಲ್ ಹುದಾ ಅಧ್ಯಕ್ಷ ಯು.ಎಂ.ಹಸನಬ್ಬ ಕಚೇರಿ ಉದ್ಘಾಟಿಸಿದರು. ಸವಾಜ ಸೇವಕ ಅಬ್ದುಲ್ ರಜಾಕ್ ಬಬ್ಬುಕಟ್ಟೆ ಕಂಪ್ಯೂಟರ್ ಉದ್ಘಾಟಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸಾವಾಜಿಕ ಕಾರ್ಯಕರ್ತ ಇಝ್ಝ ಬಜಾಲ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿವಾರ್, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಉಳ್ಳಾಲ ಜವಾಅತೇ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂ, ಮುಸ್ಲಿಂ ಜಸ್ಟೀಸ್ ಫಾರಂ ಅಧ್ಯಕ್ಷ ಇಕ್ಬಾಲ್ ಸಾವಾಣಿಗೆ, ಉಳ್ಳಾಲ ನಗರಸಭೆಯ ವಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ರಾಜಕೀಯ ಮುಖಂಡ ಮೆಗಾ ಸಲೀಂ, ಮನ್ಸೂರ್ ಮಂಚಿಲ ಮೊದಲಾದವರಿದ್ದರು.

ಹಸನ್ ಅಬೂಬಕ್ಕರ್ ಅಶ್ರಫಿ ಹವ್ದಾದಿ ದುವಾ ನೆರವೇರಿಸಿದರು. ಸಂಶೀರ್ ಬುಡೋಳಿ ನಿರೂಪಿಸಿದರು.