ಜಿಲ್ಲೆ

ನ್ಯಾಮತಿಯ ಕೆರೆ ಕಟ್ಟೆಗಳಿಗೆ ಜೀವಕಳೆ

Davangere - Desk - Basavaraja P

ನ್ಯಾಮತಿ: ನಿರಂತರ ಮಳೆಗೆ ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನ ಕೆರೆ, ಕಟ್ಟೆಗಳಿಗೆ ಜೀವಕಳೆ ಬಂದಿದ್ದು ಹಳ್ಳ- ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ಯರಗನಾಳ್ ಗೌಡನಕೆರೆಗೆ ಕೋಡಿ ಬಿದ್ದು ಗ್ರಾಮದೊಳಗೆ ನೀರು ನುಗ್ಗಿದ ಕಾರಣ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ದಸರಾ ರಜೆ ಬಳಿಕ ಆರಂಭಗೊಳ್ಳಬೇಕಿದ್ದ ಶಾಲೆಗಳು ಮಳೆಯಿಂದ ಮೊದಲ ದಿನ ಸೋಮವಾರ ನಡೆಯಲಿಲ್ಲ. ಮಳೆ ಬಿಡುವು ಕೊಟ್ಟಿದ್ದರಿಂದ ಮಂಗಳವಾರದಿಂದ ಪುನಾರಂಭಗೊಂಡವು.

ಸವಳಂಗದಲ್ಲಿ 30.2 ಮಿ.ಮೀ, ಬೆಳಗುತ್ತಿ 48.8, ಗೋವಿನ ಕೋವಿಯಲ್ಲಿ 1.8 ಮಿ.ಮೀ ಮಳೆ ದಾಖಲಾಗಿದೆ.