ಜಿಲ್ಲೆ

ಮಂಗಳೂರು ಹಿಂದೂ ಸಂಘಟನೆ ಮುಖಂಡರಿಗೆ ಜೀವ ಬೆದರಿಕೆ

ಮಂಗಳೂರು: ಬಜಪೆಯ ಕಿನ್ನಿಪದವುನಲ್ಲಿ ಮೇ 1 ರಂದು ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ವಿವಿಧ ಹಿಂದೂ ಸಂಘಟನೆಗಳ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗಿದೆ.

ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಸಂಚಾಲಕ ಶರಣ್ ಪಂಪ್‌ವೆಲ್, 2017ರಲ್ಲಿ ಬಂಟ್ವಾಳದ ಬೆಂಜನಪದವು ಎಂಬಲ್ಲಿ ನಡೆದ ಎಸ್‌ಡಿಪಿಐ ನಾಯಕ ಅಶ್ರ್ ಕಲಾಯಿ ಹತ್ಯೆ ಪ್ರಕರಣದ ಆರೋಪಿ ಬಜರಂಗದಳ ಮುಖಂಡ ಭರತ್ ಕುಮ್ಡೇಲುಗೆ ಜೀವ ಬೆದರಿಕೆಯೊಡ್ಡುವ ಪೋಸ್ಟ್‌ಗಳನ್ನು ಹಾಕಲಾಗಿದೆ. ಜತಗೆ 2018ರಲ್ಲಿ ನಡೆದ ಕೊಟ್ಟಾರಚೌಕಿಯಲ್ಲಿ ಅಬ್ದುಲ್ ಬಶೀರ್ ಎಂಬವರ ಕೊಲೆ ಪ್ರಕರಣದ ಆರೋಪಿ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜಿತ್ ಅಲಿಯಾಸ್ ಶ್ರೀಜಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿದೆ.

ಮೇ 5ರಂದು ಕೊಲ್ಲುತ್ತೇವೆ

ಬಜರಂಗದಳ ಮುಖಂಡ ಭರತ್ ಕುಮ್ಡೇಲುಗೆ ‘ಆನ್ ಫಿಕ್ಸ್‌ಡ್ ಲೀಡರ್’ ಎನ್ನುವ ಪೇಜ್‌ನಿಂದ ಬೆದರಿಕೆ ಹಾಕಲಾಗಿದ್ದು, ಜತೆಗೆ ತಲವಾರುಗಳ ಚಿತ್ರಗಳನ್ನೂ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ‘ಮೇ 5ರಂದು ರಾತ್ರಿ 9.30ಕ್ಕೆ ನಿನ್ನನ್ನು ನಿನ್ನ ಸ್ಥಳಕ್ಕೆ ಬಂದು ಕೊಲ್ಲುತ್ತೇವೆ’ ಎಂದು ತಿಳಿಸಲಾಗಿದೆ. ‘ಅಶ್ರ್ನನ್ನು ಕೊಂದಿರುವ ನಿನ್ನನ್ನು ಮರೆತಿಲ್ಲ’ ಎಂದು ಹಾಕಲಾಗಿದೆ. ಅಶ್ರ್ ಕಲಾಯಿ ಹತ್ಯೆಗೆ ಪ್ರತಿಕಾರವಾಗಿ ಬಂಟ್ವಾಳದಲ್ಲಿ ಶರತ್ ಮಡಿವಾಳ ಹತ್ಯೆಯಾಗಿತ್ತು. ಪೋಸ್ಟ್‌ನಲ್ಲಿ ಸುಹಾಸ್ ಶೆಟ್ಟಿಯ ೆಟೋವನ್ನೂ ಹಾಕಿ ಅದಕ್ಕೆ ರೈಟ್ ಮಾರ್ಕ್ ಹಾಕಿದ್ದಾರೆ

ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್ಸುದ್ದಿವಾಹಿನಿಯೊಂದರ ಯುಟ್ಯೂಬ್ ಲೈವ್‌ನಲ್ಲಿ ಹಾಕಿರುವ ಕಮೆಂಟ್‌ನಲ್ಲಿ ‘ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್ - ಸಾಯಲು ಸಿದ್ಧನಾಗು’ ಎಂದು ಬರೆಯಲಾಗಿದೆ. ಇನ್ನೊಂದು ಕಮೆಂಟ್‌ನಲ್ಲಿ ಅಬ್ದುಲ್ ಮುನೀರ್ ಎನ್ನುವ ಹೆಸರಿನ ವ್ಯಕ್ತಿ ‘ನೆಕ್ಸ್ಟ್ ಬುಕ್ಕಿಂಗ್ ಶರಣ್ ಪಂಪ್‌ವೆಲ್’ ಎಂದು ಹಾಕಿದ್ದಾನೆ.

ಶ್ರೀಜಿತ್‌ಗೆ ಮಲಯಾಳದಲ್ಲಿ ಮೆಸೇಜ್

ಬಿಜೆಪಿ ಕಾರ್ಯಕರ್ತ ಸುರತ್ಕಲ್‌ನ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಕೊಟ್ಟಾರಚೌಕಿಯಲ್ಲಿ ನಡೆದ ಅಬ್ದುಲ್ ಬಶೀರ್ ಹತ್ಯೆ ಪ್ರಕರಣದ ಆರೋಪಿ ಶ್ರೀಜಿತ್‌ಗೂ ಬೆದರಿಕೆ ಹಾಕಲಾಗಿದೆ. ಕಿಲ್ಲರ್ಸ್‌ ಟಾರ್ಗೆಟ್ ಎನ್ನುವ ಪೇಜ್‌ನಿಂದ ಈ ಮೊದಲು ಬೆದರಿಕೆ ಹಾಕಲಾಗಿತ್ತು. ಈಗ ಅಬು ಸಫಿಯಾನ್ ಎನ್ನುವ ಪೇಜ್‌ನಿಂದ ಮಲಯಾಳ ಭಾಷೆಯಲ್ಲಿ ಮೆಸೇಜ್ ಕಳಿಹಿಸಿ ಎಲ್ಲಿದ್ದೀಯ ನೆಕ್ಸ್ಟ್ ನೀನೇ ಎಂದು ಬೆದರಿಕೆ ಹಾಕಲಾಗಿದೆ.

ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದ್ದು, ಪ್ರಚೋದನಕಾರಿ ಸಂದೇಶ ಹಾಕುವವರ ವಿರುದ್ಧ ಈಗಾಗಲೇ 15ಕ್ಕೂ ಅಧಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.