ಧಾರವಾಡ: ಯುವಕನೊಬ್ಬ ಕರೆ ಮಾಡಿದ್ದಲ್ಲದೆ, ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಗುರುನಾಥಗೌಡ ಗೌಡರ ಎಂಬುವರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೋವನಕೊಪ್ಪ ನಿವಾಸಿಯಾಗಿರುವ ಗುರುನಾಥಗೌಡಗೆ ಪಕ್ಕದ ಸೋಮಾಪುರ ಗ್ರಾಮದ ಮಂಜುನಾಥ ಸಂಗಪ್ಪ ಬೇಗೂರ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಫೆ. ೨೩ ಮತ್ತು ೨೪ರಂದು ಗುರುನಾಥಗೌಡಗೆ ಕರೆ ಮಾಡಿದ್ದ ಮಂಜುನಾಥ ಬೇಗೂರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾನೆ. ನಂತೆರ ೨೬ರಂದು ಮನೆಗೆ ಬಂದು ಜೀವ ಬೆದರಿಕೆ ಹಾಕಿ ಹೋಗಿದ್ದಾನೆ. ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಽಗಳ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣದ ಸಾಕ್ಷಿ ಹೇಳದಂತೆ ಒತ್ತಡ ಹೇರುವ ಕುತಂತ್ರವಾಗಿದೆ. ಆದ್ದರಿಂದ ಮಂಜುನಾಥ ಬೇಗೂರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗುರುನಾಥಗೌಡ ದೂರಿನಲ್ಲಿ ತಿಳಿಸಿದ್ದಾರೆ.