ಧಾರವಾಡ: ಆಸ್ತಿಯ ವಿಚಾರವಾಗಿ ತಾಯಿಯನ್ನು ಹತ್ಯೆಗೈದು, ತಂದೆಯ ಕೊಲೆಗೆ ಯತ್ನಿಸಿದ್ದ ಅಪರಾಽಗೆ ೩ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ಆದೇಶಿಸಿದೆ.
ಅಣ್ಣಿಗೇರಿ ತಾಲೂಕಿನ ಬೆನ್ನೂರ ಗ್ರಾಮದ ಬಸವರಾಜ ಕಲ್ಲಪ್ಪ ಅಣ್ಣಿಗೇರಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಆಸ್ತಿಯ ವಿಚಾರವಾಗಿ ತನ್ನ ವಯೋವೃದ್ಧ ತಂದೆ- ತಾಯಿಯೊಂದಿಗೆ ನಿರಂತರ ಜಗಳವಾಡುತ್ತಿದ್ದ. ಹಿರಿಯರು ಮಧ್ಯಸ್ಥಿಕೆ ವಹಿಸಿ ಬಸವರಾಜನಿಗೆ ಎರಡೂವರೆ ಎಕರೆ ಜಮೀನಿ ಕೊಡಿಸಿದ್ದರು. ಆದರೂ ಜಗಳ ಬಿಟ್ಟಿರಲಿಲ್ಲ. 2022ರ ಮೇ 1ರಂದು ಮತ್ತೆ ಜಗಳ ತೆಗೆದು ತಾಯಿಯನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿ, ತಂದೆಯ ಕೊಲೆಗೂ ಯತ್ನಿಸಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಅಣ್ಣಿಗೇರಿ ಠಾಣೆ ಇನ್‌ಸ್ಪೆಕ್ಟರ್ ಸಿ.ಜಿ. ಮಠಪತಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧಿಽÃಶ ಎನ್. ಸುಬ್ರಮಣ್ಯ ಅವರು ಆರೋಪಿ ತಪ್ಪಿತಸ್ಥ ಎಂದು ನಿರ್ಧರಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕ ಪ್ರಶಾಂತ ಎಸ್. ತೊರಗಲ್ ವಾದ ಮಂಡಿಸಿದ್ದರು.