ಚಿಕ್ಕೋಡಿ: ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಗಳಿಗೆ ಅದರದೇ ಆದ ವಿಶೇಷತೆ ಇದೆ. ಶ್ರಾವಣ ಮಾಸದಲ್ಲಿ ಮಹಾತ್ಮರ ನುಡಿಗಳನ್ನು ಆಲಿಸಿದರೆ ಜೀವನ ಪಾವನವಾಗುತ್ತದೆ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ಇಲ್ಲಿನ ಸಂಪಾದನಾ ಚರಮೂರ್ತಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಹಾತ್ಮರ ಚರಿತಾಮೃತ ಪ್ರವಚನ ಮಂಗಲ ಸಮಾರಂಭದಲ್ಲಿ ಮಾತನಾಡಿ, ಶ್ರಾವಣ ಮಾಸ ಎಲ್ಲ ಹಬ್ಬಗಳಲ್ಲಿ ಪವಿತ್ರ ಮಾಸ ಎಂದರು.
ಹಿರಿಯ ವ್ಯಾಪಾರಸ್ಥ ಸುಭಾಷ ಕವಲಾಪುರೆ, ಸಿಎಲ್ಇ ಸಂಸ್ಥೆಯ ನಿರ್ದೇಶಕ ಹಾಗೂ ಯುವ ಧುರೀಣ ಮಲ್ಲಿಕಾರ್ಜುನ ಜಗದೀಶ ಕವಟಗಿಮಠ, ಬಿಜೆಪಿ ಮಹಿಳಾ ಟಕದ ಮಂಡಳ ಅಧ್ಯೆ ಶಕುಂತಲಾ ಡೊನವಾಡೆ, ಪುರಸಭೆ ಅಧ್ಯೆ ವೀಣಾ ಕವಟಗಿಮಠ, ಪ್ರಭು ಬೆಲ್ಲದ, ಸಂಜು ಹಿರೇಮಠ, ಶೇಖರ ಚಿತ್ತವಾಡಗಿ ಇತರರಿದ್ದರು.