ಮುಂಡರಗಿ: ಇಂದಿನ ಒತ್ತಡದ ಜೀವನದಲ್ಲಿ ವಿದ್ಯಾರ್ಥಿಗಳು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಅದರಿಂದ ಹೊರಬರಲು ಮತ್ತು ನಮ್ಮೆಲ್ಲರ ಜೀವನ ಸಾರ್ಥಕವಾಗಬೇಕಾದರೆ, ಪ್ರತಿಯೊಬ್ಬರು ಶುದ್ಧ ಮನಸ್ಥಿತಿಯನ್ನು ಹೊಂದಬೇಕು. ಎಲ್ಲರಿಗೂ ಒಳ್ಳೆಯದನ್ನು ಬಯಸಬೇಕು ಎಂದು ನರೇಗಲ್ಲ ಶ್ರೀಅನ್ನದಾನೇಶ್ವರ ಕಾಲೇಜ್‌ನ ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಸಜ್ಜನರ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಕ್ಯೂಎಸಿ ಘಟಕದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಅನೀಲ ವೈದ್ಯ, ಗೊಟಗೋಡಿ ಕನ್ನಡ ಜಾನಪದ ವಿ.ವಿ. ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ ಮಾತನಾಡಿದರು. ಪ್ರಾಚಾರ್ಯ ಎಸ್.ಆರ್.ಚಿಗರಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ.ನಾಗರಾಜ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಗದೀಶ ಹುಲ್ಲೂರ, ಎ.ವಿ. ಹಿರೇಮಠ, ಎಸ್.ಎ. ಬೆಲ್ಲದ, ಚೇತನ ಪಾಟೀಲ, ಕಾವೇರಿ, ನಾಗರತ್ನ ಆರ್, ಅಜೀತ ಬನ್ನಿಕೊಪ್ಪ, ಮಂಜುನಾಥ ಎಲಿ, ಕರಿಬಸಪ್ಪ ಎಂ, ದಯಾವತಿ ಬರದೂರ, ಡಾ.ಶಂಕರಪ್ಪ ಬಡಿಗೇರ ಇದ್ದರು. ಉಪನ್ಯಾಸಕರಾದ ಡಾ.ಮಿಟ್ಯಾನಾಯ್ಕ ಸ್ವಾಗತಿಸಿದರು. ಬಿ.ಎಸ್.ಸಸಿಮಠ ನಿರೂಪಿಸಿದರು. ವಿದ್ಯಾರ್ಥಿನಿ ಶಕೀರಬಾನು ಬಾಗವಾನ್ ವಂದಿಸಿದರು.