ಇಂಡಿ: ಇಂದಿನ ಯುವಕ, ಯುವತಿಯರು ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ನಾದ ಬಿ.ಕೆ ಗ್ರಾಮದಲ್ಲಿ ಭಾನುವಾರ ಲಕ್ಷ್ಮೀದೇವಿ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಒಲವು ತೋರುತ್ತಿದ್ದಾರೆ. ನಮ್ಮ ಜೀವನವನ್ನು ಯಜ್ಞದಂತೆ ನಡೆಸಬೇಕು.
ನಾವು ಎಲ್ಲಿರುತ್ತೇವೆ ಎನ್ನುವುದು ಮುಖ್ಯವಲ್ಲ. ಹೇಗಿರುತ್ತೇವೆ ಎನ್ನುವುದು ಮುಖ್ಯ. ನಮ್ಮ ಸಂಸ್ಕೃತಿ, ಆಚಾರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಾಗಿ ಪಾಲ್ಗೊಳ್ಳಬೇಕು. ಗ್ರಾಮದಲ್ಲಿರುವ ಪಿಕೆಪಿಎಸ್ ಉತ್ತಮವಾಗಿ ನಡೆಸಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಸಾಲೋಟಗಿಯ ಶಿವಯೋಗಪ್ಪ ಜೋತಗೊಂಡ, ಮಲ್ಲನಗೌಡ ಬಿರಾದಾರ, ಉಪನ್ಯಾಸಕ ಶಿವಾನಂದ ಉಪ್ಪಾರ, ಬಸವರಾಜ ಅವದಿ ಮಾತನಾಡಿದರು.
ವೇದಮೂರ್ತಿ ಚನ್ನಬಸವ ಶ್ರೀಗಳು, ಲಕ್ಷ್ಮೀ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಶೈಲ ಅಳ್ಳಗಿ, ಉಪಾಧ್ಯಕ್ಷ ಗಂಗಪ್ಪ ದ್ಯಾಮಗೊಂಡ, ಶಿವಗೊಂಡಪ್ಪ ಪಾಟೀಲ, ಶರಣಪ್ಪ ಮೂಲಿ, ಭೀಮರಾಯ ಪೂಜಾರಿ, ವಿಜಯಕುಮಾರ ಮಠಪತಿ, ಬಾಪುರಾಯ ಕಿವಟೆ, ಸೋಮು ಮ್ಯಾಕೇರಿ, ಮಹಾಂತೇಶ ಕೋಳಿ, ಶರಬಯ್ಯ ಮಠಪತಿ ಮತ್ತಿತರಿದ್ದರು.
ಲಕ್ಷ್ಮೀ ದೇವರ ಪಲ್ಲಕ್ಕಿ ಹಾಗೂ ನಾದ ಕೆಡಿ ಕನ್ನಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು.