ತಾಳಿಕೋಟೆಯಲ್ಲಿ ಶರಣಮುತ್ಯಾಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಅಪರ ಜಿಲ್ಲಾ-ಕಾರಿ ಸೋಮಲಿಂಗ ಗೆಣ್ಣೂರ ಉದ್ಘಾಟಿಸಿದರು. ತಹಸೀಲ್ದಾರ್​ ಕೀರ್ತಿ ಚಾಲಕ, ಬಸಣ್ಣ ಶರಣಮುತ್ಯಾ, ಸಿದ್ದನಗೌಡ ಪೊಲೀಸ್​ ಪಾಟೀಲ ಇದ್ದರು. 
ಜಿಲ್ಲೆ

ಕಾಯಕ ದಾಸೋಹದಿಂದ ಜೀವನ ಪಾವನ

ತಾಳಿಕೋಟೆ: ಪ್ರತಿಯೊಬ್ಬರು ಕಾಯಕ ಮತ್ತು ದಾಸೋಹ ಪದ್ಧತಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಪಟ್ಟಣದ ಶರಣಮುತ್ಯಾ ಜಾತ್ರೆ ನಿಮಿತ್ತ ನಡೆದ ಬಸರಕೋಡ ಪವಾಡ ಬಸವೇಶ್ವರ ಪುರಾಣ ಮಂಗಲೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸು ವಿಚಲಿತವಾಗದಂತೆ ನೋಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಜಯ ಕರ್ನಾಟಕ ಸಂಟನೆ ಜಿಲ್ಲಾಧ್ಯ ಸಂಗಮೇಶಗೌಡ ದಾಶ್ಯಾಳ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ಪ್ರವಚನಕಾರ ಶರಣ ಸೋಮನಾಳದ ಮಹಾದೇವಯ್ಯ ಶಾಸ್ತ್ರೀ, ಪತ್ರಕರ್ತ ಜಿ.ಟಿ. ೂರ್ಪಡೆ, ಸಂಗೀತ ಕಲಾವಿದರಾದ ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಿದ ಬಸನಗೌಡ ಕುಪ್ಪಿ ದಂಪತಿಯನ್ನು ಸನ್ಮಾನಿಸಲಾಯಿತು.

ಕೈಲಾಸಪೇಠೆಯ ಶ್ರೀ ಬಸವಪ್ರಭು ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತಹಸೀಲ್ದಾರ್​ ಕೀರ್ತಿ ಚಾಲಕ, ವಜ್ಜಲ ಶರಣರು, ಶರಣರ ಮಠದ ಬಸಣ್ಣ ಶರಣಮುತ್ಯಾ, ಸಿದ್ದನಗೌಡ ಪೊಲೀಸ್​ ಪಾಟೀಲ, ಡಿಸಿಸಿ ಬ್ಯಾಂಕಿನ ಶಿವಾನಂದ ಕುಂಬಾರ, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು, ಸಿದ್ದಣ್ಣ ಶರಣರ, ವ್ಹಿ.ಸಿ. ಹಿರೇಮಠ, ಸಹಕಾರಿ ಬ್ಯಾಂಕ್​ ಅಧ್ಯ ಕೆ.ಸಿ. ಸಜ್ಜನ, ಶಾಂತಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ಮಲ್ಲಣ್ಣ ಇಂಗಳಗಿ, ಗವಾಯಿ ಗುಂಡಣ್ಣ ಹಂದಿಗನೂರ, ಅಭಿಷೇಕ ಚಕ್ರವರ್ತಿ, ಶಂಕರಗೌಡ, ಶಿವನಗೌಡ ಪಾಟೀಲ, ಅಭಿಷೇಕ ರಜಪೂತ, ಸಾಹಿಲ್​ ಮುರಾಳ, ಬಸನಗೌಡ ಮಾಲಿಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಸಾಹೇಬಗೌಡ ಪಾಟೀಲ, ಶಿವಶರಣಪ್ಪ ಕುಂಬಾರ, ಶಂಕರ, ಅಡವೆಪ್ಪಗೌಡ ಪಾಟೀಲ ಉಪಸ್ಥಿತರಿದ್ದರು.

ಈರಣ್ಣ ಶರಣರ ಸ್ವಾಗತಿಸಿದರು. ಶರಣಗೌಡ ಪೊಲೀಸ್​ ಪಾಟೀಲ ವಂದಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿದರು.