ಕವಲಗಿ ಗ್ರಾಮದ ಸಂಗನಬಸವ ಅಂತಾರಾಷ್ಟ್ರೀಯ ಶಾಲೆಯಲ್ಲಿ ನೇತ್ರ ದಾನ ದಿನ ಆಚರಿಸಲಾಯಿತು. ಡಾ. ಜಮೀರ ಗೋಲೇವಾಲೆ, ಡಾ. ಬಸವಂತ್ರಾಯ ಮಸಳಿ, ಶರ್ಮಿಳಾ ಹೇಮಂತ ಮತ್ತಿತರರಿದ್ದಾರೆ. 
ಜಿಲ್ಲೆ

ನೇತ್ರದಾನದಿಂದ ಜೀವನ ಸಾರ್ಥಕ

ಗಿರೀಶ ಸಗರ

ವಿಜಯಪುರ : ಮರಣದ ನಂತರ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ನೇತ್ರತ ಡಾ. ಜಮೀರ ಗೋಲೇವಾಲೆ ಹೇಳಿದರು.

ತಾಲೂಕಿನ ಕವಲಗಿ ಗ್ರಾಮದಲ್ಲಿನ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನೇತ್ರ ದಾನ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿಥಿ ಮಕ್ಕಳ ತ ಡಾ. ಬಸವಂತ್ರಾಯ ಮಸಳಿ ಮಾತನಾಡಿ, ಜನಸಾಮಾನ್ಯರಲ್ಲಿ ನೇತ್ರದಾನದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಮನುಷ್ಯ ಜೀವನದ ಸಾರ್ಥಕತೆಯ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ಅಧ್ಯತೆ ವಹಿಸಿದ ಪ್ರಾಚಾಯೆರ್ ಶರ್ಮಿಳಾ ಹೇಮಂತ ಮಾತನಾಡಿ, ಕಣ್ಣುಗಳಿಂದಲೇ ಮಾತ್ರ ನಾವು ಜಗತ್ತಿನ ಸೌಂದರ್ಯ, ಬಣ್ಣ, ಭಾವನೆ ಮತ್ತು ಪ್ರೀತಿಪಾತ್ರರನ್ನು ಕಾಣಲು ಸಾಧ್ಯ. ಹೀಗಾಗಿ ಕಣ್ಣಿನ ಬಗ್ಗೆ ಮಕ್ಕಳು ಸೂಕ್ತ ಕಾಳಜಿ ವಹಿಸಬೇಕೇಂದು ಸಲಹೆ ನೀಡಿದರು.

ತನುಜಾ ಪಾಟೀಲ ಸ್ವಾಗತಿಸಿದರು. ಲಕ್ಷ್ಮೀ ನಿಂಬಾಳ ನಿರೂಪಿಸಿದರು. ಗಾಯತ್ರಿ ಕಣ್ಣಿನ ಮಹತ್ವದ ಕುರಿತು ಮಾತನಾಡಿದರು. ವೈಷ್ಣವಿ ವಂದಿಸಿದರು.