ನರೇಗಲ್ಲ: ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಹೇಳಿದರು.
ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ವೀರನಗೌಡ ಮಾಲೀಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಜೀವನದುದ್ದಕ್ಕೂ ಬಸವಣ್ಣನವರ ಕಾಯಕನಿಷ್ಠೆ ಪಾಲಿಸಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಲ್ಲಿ ಸಮಾಜ ಅವರನ್ನು ಗೌರವಿಸುತ್ತದೆ ಎಂದರು. ಮಲಕಾಜಗೌಡ ಪಾಟೀಲ, ಸಂಗನಗೌಡ ಮಾಲೀಪಾಟೀಲ, ಶರಣಪ್ಪ ಹೊಸಮನಿ, ಮುತ್ತನಗೌಡ ಪಾಟೀಲ, ಈರಣ್ಣ ಹತ್ತಿಕಟಗಿ, ಕವಿತಾ ಅಂಬಣ್ಣವರ, ನಿರ್ಮಲಾ ಗಾಂಜಿ ಹಾಗೂ ಶಿವಲೀಲಾ ಮಾಲೀಪಾಟೀಲ, ಇತರರಿದ್ದರು.