ಜಿಲ್ಲೆ

ಪರಿಸರ ನಾಶವಾದರೆ ಬದುಕು ಕಷ್ಟ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಮುಖ ದಿನಗಳಲ್ಲಿ ಸಸಿ ನೇಡುವುದು ಒಂದು ಸಂಪ್ರದಾಯವಾಗಿದೆ. ಪೂರ್ವಜರು ಪ್ರತಿ ಶುಭ ಕಾರ್ಯಗಳಲ್ಲಿ ಗಿಡ&ಮರಗಳಿಗೆ ಪೂಜೆ ಮಾಡುತ್ತಿದ್ದರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ ಶಾಂತಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ&ೋಕಸ್​, ಅರಣ್ಯ ಇಲಾಖೆ, ಧಾರವಾಡ ವಕೀಲರ ಸಂ, ವಾಲ್ಮಿ, ಕೃಷಿ ವಿಶ್ವ ವಿದ್ಯಾಲಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹು&ಧಾ ಮಹಾನಗರ ಪಾಲಿಕೆ ಹಾಗೂ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್​ ಕಮಿಟಿ, ಆಶ್ರಯದಲ್ಲಿ ಕೆಲಗೇರಿ ಕೆರೆ ಆವರಣದಲ್ಲಿ ಪರಿಸರ ದಿನ ಸಮಾರಂಭವನ್ನು ಸಸಿ ನೆಟ್ಟು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಜೂ. 5ರಂದು ಮಾತ್ರ ಸಸಿ ನೆಡುವ ಕೆಲಸ ಮಾಡದೆ, ನಿತ್ಯ 1&2 ಸಸಿಗಳನ್ನು ನೇಡಬೇಕು. ಇಂತಹ ಒಂದು ಮಹತ್ವದ ಕಾರ್ಯಗಳಲ್ಲಿ ಸಮಾಜದ ಜನರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಪ್ರಮುಖವಾ. ದೇಶದಲ್ಲಿ ಶೇ. 33ರಷ್ಟು ಇದ್ದ ಅರಣ್ಯ ಪ್ರದೇಶ ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು ಎಂದರು.
ಕೃವಿವಿ ಕುಲಪತಿ ಡಾ. ಪಿ.ಎಲ್​. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಣಾಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯ ಸಂರಣಾಧಿಕಾರಿ ಪರಿಮಳಾ ವಿ.ಎಚ್​, ಎಸ್​.ಎಚ್​. ಮಿಟ್ಟಲಕೋಡ, ರಾಜೇಂದ್ರ ಪೋದ್ದಾರ, ಪಾಲಿಕೆ ಸಹಾಯಕ ಆಯುಕ್ತ ಆನಂದ ಕಾಂಬಳೆ, ವಕೀಲರ ಸಂದ ಅಧ್ಯ ಅಶೋಕ ಏಣಗಿ, ಪರಿಸರ ಅಧಿಕಾರಿ ಜಗದೀಶ ಐ.ಎಚ್​, ರುದ್ರಗೌಡ ಪಾಟೀಲ, ಇತರರು ಇದ್ದರು.
ಹಿರಿಯ ಸಿವಿಲ್​ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಸ್ವಾಗತಿಸಿದರು.