ಜಿಲ್ಲೆ

ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ

16 ಮಂದಿ ವಿರುದ್ಧ ಅಪರಾದ ಸಾಬೀತು

* ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶ

ಕನಕಪುರ

ತಮಿಳುನಾಡು ಗಡಿ ಭಾಗದ ಹುಣಸನಹಳ್ಳಿ ಗ್ರಾಮವನ್ನೇ ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದ 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ನಗರದ ಜೆ.ಎಂ.ಎ್.ಸಿ ಕೋರ್ಟ್‌ನ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಎಚ್.ಎನ್.ಕುಮಾರ್ ಆದೇಶ ಹೊರಡಿಸಿದ್ದಾರೆೆ.

ಮಹದೇವ, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಗೋಪಾಲ್, ದಿಲೀಪ್‌ರಾಜ್, ರಾಮಚಂದ್ರ, ಗುರಪ್ಪ, ರಘು, ದಶರಥ, ಹರೀಶ್, ಸುರೇಶ್ ಶಿಕ್ಷೆಗೆ ಗುರಿಯಾದವರು.

ಘಟನೆ ವಿವರ:

ತಾಲೂಕಿನ ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಹುಣಸನಹಳ್ಳಿಯಲ್ಲಿ ಬಾರ್‌ವೊಂದರ ಬಳಿ 2021ರ ಆಗಸ್ಟ್ 28 ರಂದು ಹಾಡಹಗಲೇ ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಹುಲಿಬಂಡೆ ಗ್ರಾಮದ ಶಂಕರ್(30) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಚಿನ್ನಸ್ವಾಮಿಗೆ ಇಬ್ಬರು ಪತ್ನಿಯರಿದ್ದು,

ಜಮೀನುದಾರನಾದ ಚಿನ್ನಸ್ವಾಮಿ 26.20 ಎಕರೆಯಲ್ಲಿ ಸ್ವಲ್ಪ ಜಮೀನು ಮಾರಾಟ ಮಾಡಿದ್ದ. ಉಳಿದ ಜಮೀನು ಹಂಚಿಕೆ ವಿಚಾರವಾಗಿ ಇಬ್ಬರು ಪತ್ನಿಯರ ಮಕ್ಕಳ ನಡುವೆ ಕಲಹ ಉಂಟಾಗಿತ್ತು. ಮೊದಲನೇ ಪತ್ನಿಯ ಮಗ ಓದೇಗೌಡ ಹಾಗೂ ಎರಡನೇ ಪತ್ನಿ ನೀಲಮ್ಮನ ಮಕ್ಕಳಾದ ಮಾದೇಶ ಮತ್ತು ಚನ್ನಕೃಷ್ಣರ ನಡುವೆ ಜಮೀನು ವಿವಾದ ತಾರಕಕ್ಕೆ ಏರಿ 2015ರಲ್ಲಿ ಎರಡನೇ ಪತ್ನಿಯ ಮಗ ಚನ್ನಕೃಷ್ಣ ಸೋದರ ಓದೇಗೌಡನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ

ಕೊಲೆಗೆ ಯತ್ನಿಸಿದ್ದ, ಆ ವೇಳೆ ಓದೆೇಶ್ ಪ್ರಾಣಾಪಾಯದಿಂದ ಪಾರಾಗಿದ್ದ.

ಚನ್ನಕೃಷ್ಣನ ಮೇಲಿನ ದ್ವೇಷದಿಂದ ಪಟ್ಟಾಭಿ ಎಂಬಾತನ ಜತೆ ಸೇರಿ ಓದೇಗೌಡನನ್ನು ಕೊಲೆ ಮಾಡಲಾಗಿತ್ತು, ಈ ಹಿನ್ನೆಲೆಯಲ್ಲಿ ದಾಯಾದಿ ಮಕ್ಕಳು 2021ರಲ್ಲಿ ಸ್ರಗ್ರಾಮ ಹುಲಿಬಂಡೆ ಗ್ರಾಮದಲ್ಲಿ ಚನ್ನಕೃಷ್ಣನಿಗೆ ಟ್ರಾಕ್ಟರ್‌ನಿಂದ ಗುದ್ದಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಚನ್ನಕೃಷ್ಣನ ಅಂತ್ಯಕ್ರಿಯೆ ವೇಳೆ ಚನ್ನಕೃಷ್ಣನ ಅನುಯಾಯಿಗಳು ಪ್ರತೀಕಾರವಾಗಿ ಅದೇ ಮಾದರಿಯಲ್ಲಿ ಕೊಲೆಗಡುಕರನ್ನು ಕೊಲೆಗೈಯ್ಯಲು ಪ್ರತಿಜ್ಞೆ ಮಾಡಿದ್ದರು.

ಚನ್ನಕೃಷ್ಣ ಕೊಲೆಯಾದ ಕೆಲವೇ ತಿಂಗಳಲ್ಲಿ ಓದೇಗೌಡನ ಮೊದಲ ಪತ್ನಿಯ ಮಗ ಶಂಕರನ ಕೊಲೆಗೆ ಸಂಚು ರೂಪಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ಮಾದೇವ, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಗೋಪಾಲ್ ಬರ್ಬರವಾಗಿ ಶಂಕರನ ಹತ್ಯೆಗೈದಿದ್ದರು. ಈ ಸಂಬಂಧ ಕೋಡಿಹಳ್ಳಿ

ಸಬ್‌ಇನ್‌ಸ್ಪೆಕ್ಟರ್ ಅನಂತ್‌ರಾಮ್, ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ.ಕೃಷ, ತನಿಖಾ ಸಹಾಯಕ ಮೋಹನ್ ಪ್ರಕರಣ ದಾಖಲಿಸಿಕೊಂಡು ಕೆಲ ಹೊತ್ತಿನಲ್ಲಿಯೇ ಇಬ್ಬರು ಪ್ರಮುಖರನ್ನು ಬಂಧಿಸಿದ್ದರು. ಉಳಿದ ಆರೋಪಿಗಳನ್ನು ಕೆಲ ದಿನಗಳಲ್ಲಿಯೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಪ್ರಮುಖ ಐದು ಅಪರಾಧಿಗಳ ಜತೆ ಬಂಡೇಮಾದೇಶ, ಮುನಿಸ್ವಾಮಿ, ಮಮತಾ, ದೀಪಕ್ ರಾಜ್, ರಾಮಚಂದ್ರ, ಗುರ‌್ರಪ್ಪ, ರಘು ಅಲಿಯಾಸ್ ಸೂರಿಗೋಪಾಲ, ವೆಂಕಟೇಶ್ ಎಂಬುವವರ ಕೊಲೆಗೆ ಸಹಕಾರ ನೀಡಿದ ಹಾಗೂ ದಶರಥ, ಹರೀಶ್, ಸುರೇಶ್, ವಿನಯಪ್ರಸಾದ್ ಎಂಬುವವರು ಕೊಲೆಗೆ ಒಳಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಸರ್ಕಾರಿ ಅಭಿಯೋಜಕಿ ಎಂ.ಕೆ.ರೂಪಲಕ್ಷ್ಮಿ ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.