ಜಿಲ್ಲೆ

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ:ಮಹಿಳೆಯನ್ನು ಕೊಲೆ ಮಾಡಿದ ಅಪರಾಧಿಗೆ ಅಧಿಕ ಮತ್ತು ಜಿಲ್ಲಾ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ಹಾಗೂ 11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ರಾಮದುರ್ಗ ನಿವಾಸಿ ನದೀಮ ಇಮಾಮಹುಸೇನ್ ಮುಲ್ಲಾ ಶಿಕ್ಷೆಗೆ ಒಳಗಾದ ಅಪರಾಧಿ. ಮಹಿಳೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಹಾಗೂ ಲೈಂಗಿಕ ಸಂಪರ್ಕಕ್ಕೆ ಸಹಕಾರ ನೀಡದ ಹಿನ್ನೆಲೆ ಅವಳನ್ನು ಚಾಕುವಿನಿಂದ ಇರಿದು 2017ರಲ್ಲಿ ಕೊಲೆ ಮಾಡಿರುವ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಸವಿತಾಕುಮಾರಿ ಎನ್. ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಜಿ.ದೇವರೆಡ್ಡಿ ವಾದ ಮಂಡಿಸಿದ್ದರು.