ವಿಜಯಪುರ: ಜೀವನಾನುಭವಗಳು ನಮ್ಮ ಸಾರ್ಥಕ ಬದುಕಿಗೆ ನೆಲೆ ಒದಗಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ. ಹೂಗಾರ ಹೇಳಿದರು.
ನಗರದ ಡಾ.ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಶನಿವಾರ ನಡೆದ ಎ.ಎಸ್. ಹಿಪ್ಪರಗಿ ಪ್ರತಿಷ್ಠಾನದ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದಲೇ ಗುರುಗಳ ಆಳವಾದ ಅಧ್ಯಯನ, ನೈಜವಾದ ಘಟನೆಗಳ ನಿರೂಪಣೆ ಮತ್ತು ಗುರುಗಳ ಹೃದಯ ವೈಶಾಲ್ಯತೆಯು ಮನುಷ್ಯನನ್ನಾಗಿ ತಯಾರು ಮಾಡುವಲ್ಲಿ ಸಹಾಯಕವಾಗುವವು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಎಸ್. ಮದಭಾವಿ ಮಾತನಾಡಿ, ಸಂಶೋಧನ ಕೇಂದ್ರದಲ್ಲಿರುವುದರಿಂದ ಸುದೀರ್ಘವಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು ಎಂದರು.
ಎಂ.ಎಂ. ಅಂಗಡಿ, ಪರಶುರಾಮ ಪೋಳ, ಗುರುಬಾಯಿ ದೇವಣಗಾಂವ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಬಿ.ಆರ್. ಬನಸೋಡೆ, ಸಂಗಮೇಶ ಬದಾಮಿ, ರಾವ್‌ಸಾಹೇಬ ಬಿರಾದಾರ, ಎಸ್.ಜಿ. ನಾಡಗೌಡ, ಎಸ್.ವೈ. ಗದಗ, ಸಿದ್ಧಣ್ಣ ಉತ್ನಾಳ, ವಿಠಲ ತೇಲಿ, ಎಂ.ಬಿ. ಮಡಗೊಂಡ, ಶಕುಂತಲಾ ದೊಡಮನಿ, ಎಂ.ಎಸ್. ಚಾಂದಕವಠೆ, ಎ.ಎಸ್.ಕಂಚ್ಯಾಣಿ, ಜೆ.ಎಸ್. ಕಂಚ್ಯಾಣಿ, ಎಸ್.ಎಚ್. ಕಸಬೆಗೌಡ, ಎಸ್.ಎಂ. ಔರಸಂಗ, ಬಿ.ಎಚ್. ಬಾದರಬಂಡಿ, ಬಿ.ಕೆ. ಗೋಟ್ಯಾಳ, ಬಿ.ಎಂ. ಜುಮನಾಳ, ಮ.ಗು. ಬಿರಾದಾರ, ಆರ್.ಎಚ್. ಬಿರಾದಾರ ಮತ್ತಿತರರಿದ್ದರು.
ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಬಿ.ಎಂ. ಪಾಟೀಲ ವಚನ ಗಾಯನ ಪ್ರಸ್ತುತಪಡಿಸಿದರು. ಪ್ರೊ.ಎಸ್.ಬಿ.ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಸಿ. ನಾಗಠಾಣ ಸಾಧಕರನ್ನು ಪರಿಚಯಿಸಿದರು. ಎಸ್.ಎಂ. ಹದಿಮೂರ ನಿರೂಪಿಸಿದರು. ವಿದ್ಯಾವತಿ ಅಂಕಲಗಿ ವಂದಿಸಿದರು. ದಿ. ಡಾ.ಗುರುಲಿಂಗ ಕಾಪಸೆಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.