ಜಿಲ್ಲೆ

ಜೀವನದಲ್ಲಿ ಬೇಸತ್ತು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಶಿಗ್ಗಾಂವಿ: ಕೆರೆಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶಾರವ್ವ ಗುರುಸಿದ್ದಪ್ಪ ದೊಡ್ಮನಿ (55) ಮೃತ ಮಹಿಳೆ.

ಇವರ ಕಾಲಿಗೆ ಹಾವು ಕಚ್ಚಿ ವಿಷ ಏರಿದ್ದರಿಂದ ಕಾಲು ಕಟಾವು ಮಾಡಲಾಗಿತ್ತು. ಇದರಿಂದ ಬೇಸತ್ತು ಗ್ರಾಮದ ಹೊಸಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.