ಜಿಲ್ಲೆ

ಸುಳ್ಳು ಮಾಹಿತಿ ನೀಡಿ 89.91 ಲಕ್ಷ ರೂ. ವಂಚನೆ

ಹಾನಗಲ್ಲ: ಸಹಕಾರಿ ಸಂಘಕ್ಕೆ ಸುಳ್ಳು ಮಾಹಿತಿ ನೀಡಿ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬ ಬರೋಬ್ಬರಿ 89.91 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ಶಿವ ಪತ್ತಿನ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುದ್ರಗೌಡ ವೀರನಗೌಡ ಪಾಟೀಲ (58) ವಂಚಿಸಿರುವ ಆರೋಪಿ.

ಈತನ ವಿರುದ್ಧ ಸಂಘದ ಅಧ್ಯಕ್ಷ ಪಿ.ಎಂ. ಪಾಟೀಲ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯು 20219ರಿಂದ 2021ರ ವರೆಗಿನ ಅವಧಿಯಲ್ಲಿ ಸುಳ್ಳು ಖರ್ಚು, ಲಾಕರ್​ ಬಾಡಿಗೆ, ಉಳಿತಾಯ ಠೇವಣಿ ಸೇರಿ ಇತರ ಎಲ್ಲ ಮಾಹಿತಿಯನ್ನು ಸುಳ್ಳು ದಾಖಲಿಸಿ 89.91 ಲಕ್ಷ ರೂ. ವಂಚಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.