ಸುಳ್ಳು, ಬಾಂಡ್, ಪಿಗ್ನಿ, ಕಲೆಟರ್, ಜನರಿಗೆ, ಮೋಸ, lie, bond, pigney, collector, to people, cheat,
ಶಿಗ್ಗಾಂವಿ: ಸಹಕಾರಿ ಸಂದ ಹೆಸರಿನಲ್ಲಿ ನಕಲಿ ಬಾಂಡ್ಗಳನ್ನು ನೀಡಿ ಗ್ರಾಹಕರಿಂದ 7.46 ಲಕ್ಷ ರೂ. ಪಡೆದು ಸಾರ್ವಜನಿಕರಿಗೆ ಹಾಗೂ ಸಹಕಾರಿ ಸಂಕ್ಕೆ ಮೋಸ ಮಾಡಿದ ಆರೋಪದಡಿ ಪಿಗ್ನಿ ಏಜೆಂಟನ ಮೇಲೆ ಇಲ್ಲಿಯ ಸಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ 2ನೇ ಪ್ಲಾಟ್ನ ನಿವಾಸಿ ಮಹೆಬೂಬ ಸುಭಾನಿ ಅನ್ವರಸಾಬ ಗುಜ್ಜಾರ ಮೋಸ ಮಾಡಿರುವ ಆರೋಪಿ.
ಈತನ ವಿರುದ್ಧ ಸುಯೋಗ ವಿವಿದೋದ್ದೇಶಗಳ ಸಹಕಾರಿ ಸಂದ ವ್ಯವಸ್ಥಾಪಕ ಪ್ರವಿಣ ಬೀರಪ್ಪ ಮುದವಣ್ಣನವರ ದೂರು ನೀಡಿದ್ದಾರೆ. ಆರೋಪಿಯು ಸಹಕಾರಿ ಸಂದಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಿಂದ ಪಿಗ್ಮಿ ರೂಪದಲ್ಲಿ ಪಡೆದ 1.31 ಲಕ್ಷ ರೂ. ಹಾಗೂ ಸಹಕಾರಿ ಸಂದ ಹೆಸರಿನಲ್ಲಿ ನಕಲಿ ಬಾಂಡ್ ಪ್ರೀಂಟ್ ಮಾಡಿ ಅದರಲ್ಲಿ ಹಿಂದೂಜಾ ಲೇಲ್ಯಾಂಡ್ ೈನಾನ್ಸ್ ಎಂಬ ಸುಳ್ಳು ಸೀಲ್ ಹಾಕಿ ಅದರ ಮೇಲೆ ನಕಲಿ ಸಹಿ ಮಾಡಿ ಗ್ರಾಹಕರಿಗೆ ಬಾಂಡ್ ಎಂದು ನೀಡಿ ಅವರಿಂದ 6.15 ಲಕ್ಷ ರೂ. ಪಡೆದುಕೊಂಡು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.