ಜಿಲ್ಲೆ

ರಾಮನಗರದಲ್ಲೂ ಲಿಡ್​ಕರ್​ ಮಳಿಗೆ

ರಾಮನಗರ: ಚಮೋರ್ದ್ಯಮ ಹಾಗೂ ಅದರ ಉತ್ಪನ್ನಗಳಿಗೆ ಬ್ರಾ$್ಯ್ರಂಡ್​ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಲಿಡ್​ಕರ್​ ವಹಿವಾಟನ್ನು ಜಿಲ್ಲೆಗೂ ವಿಸ್ತರಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿದೆ.

ಡಾ.ಬಾಬು ಜಗಜೀವನರಾಮ್​ ಚಮೋರ್ದ್ಯಮ ಅಭಿವೃದ್ಧಿ ನಿಗಮ ನಿಯಮಿತ (ಲಿಡ್​ಕರ್​) ತನ್ನ 18ನೇ ಔಟ್​ಲೆಟ್​ ಅನ್ನು ಜಿಲ್ಲಾ ಕೇಂದ್ರ ರಾಮನಗರದಲ್ಲಿ ತೆರೆಯಲು ಸಿದ್ಧತೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಳಿಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಏನಿದು ಲಿಡ್​ಕರ್​?: ಡಾ. ಬಾಬು ಜಗಜೀವನರಾಮ್​ ಚಮೋರ್ದ್ಯಮ ಅಭಿವೃದ್ಧಿ ನಿಗಮ ನಿಯಮಿತ ಸಮಾಜ ಕಲ್ಯಾಣ ಇಲಾಖೆಯಡಿ ನಿರ್ವಹಿಸುತ್ತಿರುವ ಅಂಗ ಸಂಸ್ಥೆ. ಇದರ ಮೂಲಕ ರಾಜ್ಯದಲ್ಲಿ ಚರ್ಮದ ಉತ್ಪನ್ನಗಳನ್ನು ಪಾರಂಪರಿಕವಾಗಿ ತಯಾರಿಸಿ ಮಾರಾಟ ಮಾಡುವ ತಳ ಸಮುದಾಯದ ಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಳಿಗೆಗಳನ್ನು ತೆರೆದು ಖಾಸಗಿ ಉತ್ಪನ್ನಗಳಿಗಿಂತ ಗ್ರಾಹಕರಿಗೆ ಕಡಿಮೆ ದರ ಹಾಗೂ ಚರ್ಮದಿಂದ ನಿರ್ಮಿತ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಿದೆ.

ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ 6 ಮಳಿಗೆಗಳು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ಬಳ್ಳಾರಿ, ರಾಯಚೂರಿನಲ್ಲಿ ತಲಾ ಒಂದು ಮಳಿಗೆ ಹೊಂದಿದ್ದು, ರಾಮನಗರದಲ್ಲಿ ಆರಂಭವಾಗುವ ಮಳಿಗೆ 18ನೇ ಮಳಿಗೆ ಆಗಿದೆ.

ಕಂದಾಯ ಭವನದಲ್ಲಿ ಮಳಿಗೆ: ಜಿಲ್ಲಾ ಕೇಂದ್ರ ರಾಮನಗರದ ಮೊದಲ ಬಳಿಗೆ ಕಂದಾಯ ಭವನದಲ್ಲಿ ನಿರ್ಮಾಣವಾಗುತ್ತಿದೆ. ಅತಿ ಜನರು ಬರುವ ಉಪ ನೋಂದಣಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ ನೂರಾರು ಮಂದಿ ಇಲ್ಲಿಗೆ ಬೇಟಿ ನೀಡುವ ಕಾರಣ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎನ್ನುವ ಉದ್ದೇಶವೂ ಇದೆ. ಇದರ ಜತೆಗೆ ಎಸ್​ಪಿ ಕಚೇರಿ, ಪಕ್ಕದಲ್ಲಿಯೇ ಸರ್ಕಾರಿ ಜಿಲ್ಲಾಸ್ಪತ್ರೆ, ಜಿಪಂ ಭವನಗಳು ಇರುವುದರಿಂದ ಸಾರ್ವಜನಿಕರು ಆರಾಮಾಗಿ ಬರಬಹುದಾಗಿದೆ. ಇಲ್ಲೇ ಜಿಲ್ಲಾಮಟ್ಟದ ಲಿಡ್​ಕರ್​ ಕಚೇರಿ ಸಹ ಆರಂಭಗೊಳ್ಳಲಿದೆ. ಮಳಿಗೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ಅತಿ ಶ್ರೀದಲ್ಲಿಯೇ ಇದು ಉದ್ಘಾಟನೆಗೊಳ್ಳಿದೆ.

ಗುಣಮಟ್ಟದ ಉತ್ಪನ್ನ: ಚರ್ಮದ ಉತ್ಪನ್ನಗಳ ಮಾರಾಟದಲ್ಲಿ ಲಿಡ್​ಕರ್​ ಗ್ರಾಹಕರ ಪ್ರಶಂಸೆಗೂ ಪಾತ್ರವಾಗಿದೆ. ಇಲ್ಲಿ ಮಾರಾಟವಾಗುವ ವಸ್ತುಗಳು ಖಾಸಗಿ ಕಂಪನಿಗಳ ದುಬಾರಿ ವಸ್ತುಗಳಿಗಿಂತಲೂ ಗುಣಮಟ್ಟದಲ್ಲಿ ರಾಜಿಯೇ ಇಲ್ಲದಂತೆ ಕಡಿಮೆ ಬೆಲೆಗೆ ದೊರೆಯುತ್ತವೆ. ಬಹುತೇಕ ಖಾಸಗಿ ಕಂಪನಿಗಳ ಉತ್ಪನ್ನಗಳಿಗಿಂತ ಶೇ.50 ಕಡಿಮೆ ಬೆಲೆಗೆ ಇಲ್ಲಿ ಚರ್ಮದ ಉತ್ಪನ್ನಗಳು ದೊರೆಯುತ್ತವೆ.

ಲಿಡ್​ಕರ್​ ಮಳಿಗೆಯಲ್ಲಿ ಚರ್ಮ ಉತ್ಪನ್ನಗಳನ್ನು ಖರೀದಿಸಿದರೆ, ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರಕ್ಕೆ ಸೇರುವ ಜತೆಗೆ, ಇದೇ ಉದ್ಯಮ ನಂಬಿ ಜೀವನ ಸಾಗಿಸುತ್ತಿರುವ ರಾಜ್ಯದ ತಳ ಸಮುದಾಯದ ಸಾವಿರಾರು ಕುಟುಂಬಕ್ಕೆ ಆರ್ಥಿಕ ಉತ್ತೇಜನ ನೀಡಿದಂತೆ ಆಗುವುದಲ್ಲದೆ, ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಲಿಡ್​ಕರ್​ ಮಳಿಗೆಯಲ್ಲಿ ಚರ್ಮದಿಂದ ಸಿದ್ಧಗೊಳಿಸಲಾದ ಚಪ್ಪಲಿ, ಶೂಗಳು ಅತಿ ಹೆಚ್ಚು ಮಾರಾಟವಾಗುತ್ತವೆ. ಜತೆಗೆ, ಬೆಲ್ಟ್​, ಪುರುಷರು ಹಾಗೂ ಮಹಿಳೆಯ ಪರ್ಸ್​, ಲೇದರ್​ ಜಾಕೆಟ್​ಗಳು ಹಾಗೂ ಬ್ಯಾಗ್​ಗಳು ಗ್ರಾಹಕರನ್ನು ಆಕರ್ಷಿಸುತ್ತವೆ.

ಲಿಡ್​ಕರ್​ನಿಂದ ರಾಜ್ಯದ 18ನೇ ಮಳಿಗೆ ರಾಮಗರದಲ್ಲಿ ತೆರೆಯಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿ ಇದ್ದು, ಶ್ರೀವೇ ಶೋರೂಂ ಲೋಕಾರ್ಪಣೆಗೊಳ್ಳಲಿದೆ. ಜಿಲ್ಲೆಯ ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು. > ಡಾ.ವಸುಂಧರಾ, ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ಚಮೋರ್ದ್ಯಮ ಅಭಿವೃದ್ಧಿ ನಿಗಮ ನಿಯಮಿತ. ಬೆಂಗಳೂರು.